ಸ್ಲೆಡ್ಜಿಂಗ್ ಮಾಡಿದ್ದು ನೀವೇ ಅಲ್ವಾ – ರಿಷಬ್ ಪಂತ್‍ರನ್ನ ಸ್ವಾಗತಿಸಿದ ಆಸೀಸ್ ಪ್ರಧಾನಿ

ಸಿಡ್ನಿ: ಹೊಸ ವರ್ಷಾಚರಣೆ ಹಾಗೂ ಸಿಡ್ನಿ ಟೆಸ್ಟ್ ಅಂಗವಾಗಿ ಟೀಂ ಇಂಡಿಯಾ ಆಟಗಾರರಿಗೆ ಆಸ್ಟ್ರೇಲಿಯಾ ಪ್ರಧಾನಿಗಳ ಸರ್ಕಾರಿ ನಿವಾಸದಲ್ಲಿ ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್‍ರನ್ನು ಅಚ್ಚರಿ ರೀತಿಯಲ್ಲಿ ಸ್ವಾಗತಿಸಿ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ಆಟಗಾರರು ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಟೀಂ ಇಂಡಿಯಾದ ಆಟಗಾರನ್ನು ಆಸೀಸ್ ಪ್ರಧಾನಿಗಳಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಅಂತೆಯೇ ತಂಡದ ಮ್ಯಾನೇಜರ್ ಸುನಿಲ್ ಸುಭ್ರಮಣ್ಯಂ ಅವರು ರಿಷಬ್ ಪಂತ್ ಅವರನ್ನು ಪ್ರಧಾನಿಗೆ ಪರಿಚಯಿಸಿದ್ದರು.

https://twitter.com/nibraz88cricket/status/1080404697461084161

ರಿಷಬ್ ಪಂತ್ ಹೆಸರು ಕೇಳುತ್ತಿದಂತೆ ಅಚ್ಚರಿಗೊಂಡವರಂತೆ ಕಂಡ ಪ್ರಧಾನಿಗಳು, ನೀವೇ ಅಲ್ವಾ ಸ್ಲೆಡ್ಜಿಂಗ್ ಮಾಡಿದ್ದು ಎಂದು ಪ್ರಶ್ನಿಸಿದರು. ಈ ವೇಳೆ ರಿಷಬ್ ಪ್ರಧಾನಿಗಳತ್ತ ನಗೆ ಬೀರಿದ್ದರು. ಬಳಿಕ ಮಾತನಾಡಿದ ಪ್ರಧಾನಿಗಳು, ರಿಷಬ್ ಅವರಿಗೆ ಸ್ವಾಗತ ಕೋರಿ ನಿಮ್ಮಂತ ಸ್ಪರ್ಧಾತ್ಮಕ ಆಟವನ್ನು ಇಷ್ಟಪಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೈನೆ ಹಾಗೂ ರಿಷಬ್ ಪಂತ್ ಪರಸ್ಪರ ಸ್ಲೆಡ್ಜಿಂಜ್ ನಡೆಸಿ ಕಾಲೆಳೆದುಕೊಂಡಿದ್ದರು. ಮೊದಲು ಆಸೀಸ್ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಧೋನಿ ಕಮ್ ಬ್ಯಾಕ್ ಮಾಡಿದ್ದನ್ನೇ ಆಸ್ತ್ರವಾಗಿಕೊಂಡಿದ್ದ ಪೈನೆ, ಬಿಗ್ ಬ್ಯಾಶ್ ಟೂರ್ನಿ ಆಡುವಂತೆ ಆಹ್ವಾನ ನೀಡಿದ್ದರು. ಅಲ್ಲದೇ ತಾನು ಪತ್ನಿಯೊಂದಿಗೆ ಸಿನಿಮಾ ಹೋದ ವೇಳೆ ಮಕ್ಕಳನ್ನು ನೋಡಿಕೊಂಡಿರು ಎಂದರು ಕಾಲೆಳೆದಿದ್ದರು. ಬಳಿಕ ಇದಕ್ಕೆ ಟಾಂಗ್ ನೀಡಿದ್ದ ರಿಷಬ್ ಪಂತ್, ಪೈನೆರನ್ನು ತಾತ್ಕಾಲಿಕ ನಾಯಕ ಎಂದು ಕರೆದು ತಿರುಗೇಟು ನೀಡಿದ್ದರು.

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಐತಿಹಾಸ ದಾಖಲೆ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *