ಬೆಂಗಳೂರು: ಸುನೀಲ್ ಎಸ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಎಲ್ಲರ ಗಮನವನ್ನೂ ತನ್ನತ್ತ ಸೆಳೆದುಕೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಇದು ಪ್ರೇಕ್ಷಕರ ಗಮನದ ಕೇಂದ್ರಕ್ಕೆ ತಲುಪಿಕೊಂಡಿತ್ತು. ಇದೀಗ ಹೊಸ ವರ್ಷದ ಕೊಡುಗೆಯಂತೆ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಭುವನ್ ನಟನೆಯ ಚಿತ್ರ ರಾಂಧವ. ಇದೀಗ ಎರಡನೇ ಟ್ರೈಲರ್ ಮೂಲಕ ಹೊಸ ವರ್ಷಾರಂಭದಲ್ಲಿಯೇ ರಾಂಧವ ಮೆರೆದಿದ್ದಾನೆ. ಅದರ ಸೊಗಸು ಕಂಡು ಪ್ರೇಕ್ಷಕರು ಕೂಡಾ ಬೆರಗಾಗಿದ್ದಾರೆ. ಈ ಟ್ರೈಲರ್ ಇಡೀ ಚಿತ್ರದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತಲೇ ಅದನ್ನು ನಿರೀಕ್ಷೆಯಾಗಿ ರೂಪಾಂತರಗೊಳಿಸುವಲ್ಲಿಯೂ ಸಫಲವಾಗಿದೆ.

ರಾಂಧವ ಮಾಮೂಲಿ ಕಥಾ ಹಂದರದ ಸಿನಿಮಾ ಖಂಡಿತಾ ಅಲ್ಲ ಎಂಬುದನ್ನು ಈ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಸಾಬೀತು ಪಡಿಸಿತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಒಟ್ಟಾರೆ ಚಿತ್ರದ ಅದ್ಧೂರಿತನದ ಸುಳಿವನ್ನೂ ತೆರೆದಿಟ್ಟಿದೆ. ಈ ಮೂಲಕ ನಾಯಕ ಭುವನ್ ಬರ್ತ್ ಡೇ ಗಿಫ್ಟ್ ಎಂಬಂತೆ ಬಿಡುಗಡೆಯಾಗಿರೋ ಟ್ರೈಲರ್ ಪ್ರೇಕ್ಷಕರ ಪಾಲಿನ ನ್ಯೂ ಇಯರ್ ಗಿಫ್ಟಾಗಿಯೂ ಮಾರ್ಪಾಡಾಗಿದೆ.
ಇದು ನಿರ್ದೇಶಕ ಸುನೀಲ್ ಎಸ್ ಆಚಾರ್ಯ ಅವರ ಕನಸಿಗೆ ಸಿಕ್ಕ ಆರಂಭಿಕ ಗೆಲುವು. ಟ್ರೈಲರ್ ಮೂಲಕವೇ ಹುಟ್ಟಿಕೊಂಡಿರೋ ಕ್ರೇಜ್ ನೋಡಿದರೆ ಸಂಭಾವ್ಯ ಗೆಲುವಿನ ಸುಳಿವೂ ನಿಚ್ಚಳವಾಗಿಯೇ ಕಾಣಲಾರಂಭಿಸಿದೆ.
https://www.youtube.com/watch?v=eRpnWE0j_mQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply