ನವದೆಹಲಿ: ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಇಳಿಕೆಯಾಗುವುದರ ಜೊತೆಗೆ ಇಂದಿನಿಂದ 23 ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‍ಟಿ ಮಂಡಳಿ ಶೇ.28 ತೆರಿಗೆ ಶ್ರೇಣಿಯಲ್ಲಿದ್ದ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿತ್ತು. ಜಿಎಸ್‍ಟಿ ಮಂಡಳಿ ಘೋಷಿಸಿದ್ದ ಸೇವೆಗಳ ಮೇಲಿನ ತೆರಿಗೆ ಇಳಿಕೆ ಹೊಸ ವರ್ಷದ ಮೊದಲ ದಿನವಾದ ಇಂದಿನಿಂದ ಜಾರಿಗೆ ಬರಲಿದೆ.
ಯಾವ ವಸ್ತುಗಳ ತೆರಿಗೆ ಇಳಿಕೆಯಾಗಿದೆ?
ಮಾನಿಟರ್, 32 ಇಂಚು ಟಿ.ವಿ ಸ್ಕ್ರೀನ್, ಟೈರ್, ಪವರ್ ಬ್ಯಾಂಕ್‍ಗಳ ಲಿಥಿಯಂ ಬ್ಯಾಟರಿ, ಗೇರ್ ಬಾಕ್ಸ್, ವಿಡಿಯೊ ಗೇಮ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡರ್ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.18ಕ್ಕೆ ತಗ್ಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‍ನ್ಯೂಸ್ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ: ಯಾವ ನಗರದಲ್ಲಿ ಎಷ್ಟು?
𝗚𝗦𝗧 𝗣𝗼𝗹𝗶𝗰𝘆 𝗿𝗲𝗰𝗼𝗺𝗺𝗲𝗻𝗱𝗮𝘁𝗶𝗼𝗻𝘀* 𝗺𝗮𝗱𝗲 𝗯𝘆 @𝗚𝗦𝗧_𝗖𝗼𝘂𝗻𝗰𝗶𝗹 𝗶𝗻 𝗶𝘁𝘀 31𝘀𝘁 𝗺𝗲𝗲𝘁𝗶𝗻𝗴
* Recommendations will come into effect after the issuance of notification pic.twitter.com/4NwUQCAGzV
— CBIC (@cbic_india) December 23, 2018
ಅಂಗವಿಕಲ ವ್ಯಕ್ತಿಗಳಿಗೆ ಬೇಕಾಗುವ ಸಾಧನಗಳ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.5ಕ್ಕೆ ಇಳಿಕೆಯಾಗಿದ್ದರೆ, ಶಿಲೆಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ. 12ಕ್ಕೆ ಇಳಿದಿದೆ. ಶೇ.18 ರಿಂದ ಶೇ.5ಕ್ಕೆ ಮಾರ್ಬಲ್ ಮೇಲಿದ್ದ ತೆರಿಗೆ ತಗ್ಗಿದರೆ, ವಾಕಿಂಗ್ ಸ್ಟಿಕ್, ಹಾರುವ ಬೂದಿಯಿಂದ ತಯಾರಿಸುವ ಇಟ್ಟಿಗೆ ಮೇಲಿದ್ದ ತೆರಿಗೆ ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಮ್ಯೂಸಿಕ್ ಪುಸ್ತಕಗಳ ಮೇಲಿದ್ದ ಶೇ.12 ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ.

ಸಿನಿಮಾ ಟಿಕೆಟ್ ಅಗ್ಗ
ಸಿನಿ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 100 ರೂ. ತನಕದ ಟಿಕೆಟ್ ಮೇಲೆ ಶೇ.18ರಷ್ಟಿದ್ದ ಜಿಎಸ್‍ಟಿಯನ್ನು ಶೇ.12ಕ್ಕೆ ಇಳಿಸಲಾಗಿದೆ. 100 ರೂ.ಗಿಂತ ಹೆಚ್ಚಿನ ದರದ ಟಿಕೆಟ್ ಮೇಲೆ ಶೇ.28ರಷ್ಟಿದ್ದ ಜಿಎಸ್‍ಟಿ ಶೇ.18ಕ್ಕೆ ತಗ್ಗಿದೆ. ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೊದಲಾದವುಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ.12ಕ್ಕೆ ಇಳಿಕೆಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗಿಫ್ಟ್ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ
ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‍ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ. 2017ರ ಜು.1ರಂದು ಜಿಎಸ್‍ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply