ಆಪ್ತರಿಗೆ ನ್ಯೂ ಇಯರ್ ಶುಭ ಕೋರಿ ಸರ್ಪ್ರೈಸ್ ಕೊಟ್ಟ ಪ್ರಕಾಶ್ ರೈ

ಬೆಂಗಳೂರು: ಆಪ್ತರೊಬ್ಬರಿಗೆ ಹೊಸ ವರ್ಷ ಶುಭಕೋರಿ 2018ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಬಹುಭಾಷಾ ನಟ ಪ್ರಕಾಶ್ ರೈ ಹೊರ ಹಾಕಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಕಣಕ್ಕೆ ಇಳಿಯಲು ಪ್ರಕಾಶ್ ರೈ ಅವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆಪ್ತರ ಬಳಿ ಚರ್ಚೆ ನಡೆಸಿಯೇ ನಿರ್ಧಾರ ತೆಗೆದುಕೊಂಡಿರುವ ಅವರು, ಹೊಸ ವರ್ಷದ ಶುಭ ಕೋರಿ ಬೆಂಬಲ ನೀಡುವಂತೆ ಮೆಸೇಜ್ ಮೂಲಕ ಕೇಳಿಕೊಂಡಿದ್ದಾರಂತೆ.

ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ಆಪ್ತರ ಬಳಿ ಚರ್ಚಿಸಿರುವೆ. ಈ ನಿಟ್ಟಿನಲ್ಲಿ ಹೊಸ ವರ್ಷಕ್ಕೆ ಹೊಸ ಪ್ರಾರಂಭವನ್ನು ಆರಂಭಿಸುತ್ತಿದ್ದೇನೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ನಿಮ್ಮ ಬೆಂಬಲದೊಂದಿಗೆ ಲೋಕಸಭೆಗೆ ಸ್ವರ್ಧಿಸುತ್ತಿದ್ದೇನೆ. ಈ ಸಂಬಂಧ ಎಲ್ಲ ಮಾಹಿತಿಯನ್ನು ಸದ್ಯದಲ್ಲೇ ನಿಮಗೆ ತಿಳಿಸುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಿಚಾರವಾದಿಗಳ ವಿವಿಧ ಪ್ರತಿಭಟನೆ ಹಾಗೂ ವಿಚಾರ ಸಂಕೀರಣಗಳ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರುತ್ತಲಿದ್ದ ಪ್ರಕಾಶ್ ರೈ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಲೋಕಸಭಾ ಚುನಾವಣೆಗಾಗಿ ಸಿದ್ಧತೆ ನಡೆಸಿದ್ದಾರೆ ಎನ್ನುವ ಊಹಾಪೋಹಗಳನ್ನು ಅವರು ನಿಜ ಮಾಡಲಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಹೇಳಿಕೊಂಡಿಲ್ಲ ಎಂದು ಆಪ್ತ ವಲಯವು ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *