ಚಿಕ್ಕಬಳ್ಳಾಪುರ: ಹೊಸ ವರ್ಷದ ಸ್ವಾಗತಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಎಲ್ಲೆಡೆ ವರ್ಷಕ್ಕೆ ಸ್ವಾಗತ ಕೋರಲು ಸಿದ್ಧತೆಗಳು ಬಲು ಜೋರಾಗಿವೆ.
ಚಿಕ್ಕಬಳ್ಳಾಪುರ ನಗರದಲ್ಲೂ ಸಂಭ್ರಮಾಚರಣೆ ಮನೆ ಮಾಡಿದ್ದು, ಗಣೇಶ್ ಬೇಕರಿ ಮಾಲೀಕರಾದ ಚೆಲುವರಾಜು ಹಾಗೂ ರಾಘವೇಂದ್ರ 800 ಕೆಜಿಯಲ್ಲಿ 1000ಕ್ಕೂ ಹೆಚ್ಚು ಕೇಕ್‍ಗಳನ್ನು ತಯಾರಿ ಮಾಡಿದ್ದಾರೆ. ಗ್ರಾಹಕರನ್ನು ಬರ ಸೆಳೆದು ಮಾರಾಟ ಮಾಡಲೆಂದೇ ಅಂತ ಬಣ್ಣ ಬಣ್ಣದ ತರಹೇವಾರಿ ಕೇಕ್‍ಗಳನ್ನು ತಯಾರಿಸಲಾಗಿದ್ದು ನೋಡುಗರ ಮನಸೆಳೆಯುತ್ತಿವೆ.

ವಿಶೇಷವಾಗಿ ಬಾರ್ಬಿ ಗರ್ಲ್ ಕೇಕ್, ಕಪಲ್ ಕೇಕ್ ಅಂತ 12-15 ಕೆಜಿಯ ಕೇಕ್ ತಯಾರಿಸಿದ್ದು, ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ. ಸರದಿ ಸಾಲಿನಲ್ಲಿ ಸಾವಿರಕ್ಕೂ ಹೆಚ್ಚು ಕೇಕ್ ಒಂದೆಡೆ ಜೋಡಿಸಲಾಗಿದ್ದು, ಗ್ರಾಹಕರು ಕೇಕ್ ಖರೀದಿಗೆ ಮುಗಿಬಿದ್ದಿದ್ದಾರೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಕೇಕ್ ಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಹೆಚ್ಚು ಹೆಚ್ಚು ಕೇಕ್ ಗಳನ್ನು ತಯಾರಿ ಮಾಡುತ್ತಿರುವ ಮಾಲೀಕರು ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಕೇಕ್ ಗಳನ್ನು ತಯಾರಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply