ಪಂಚಭೂತಗಳಲ್ಲಿ ಕರುನಾಡ ಸಿಂಗಂ ಮಧುಕರ್ ಶೆಟ್ಟಿ ಲೀನ

ಉಡುಪಿ: ಅನಾರೋಗ್ಯದಿಂದ ನಿಧನರಾದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲೇ ಮಧುಕರ್ ಅಂತ್ಯಕ್ರಿಯೆಗೆ ನಡೆದಿದ್ದು, ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ಧಪಡಿಸಲಾಗಿತ್ತು. ತುಳುನಾಡಿನ ಬಂಟ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆದಿದೆ. ಇದನ್ನೂ ಓದಿ: ಬೊಂಬೆನಾಡಿನಿಂದ ವೃತ್ತಿ ಆರಂಭಿಸಿದ್ದರು ಮಧುಕರ್ ಶೆಟ್ಟಿ

ಮೃತ ಮಧುಕರ್ ಶೆಟ್ಟಿಗೆ ಗಂಡು ಮಕ್ಕಳಿಲ್ಲ. ಹೀಗಾಗಿ ಮಗಳು, ಅಣ್ಣನ ಮಗ ಸಾರಂಗ್, ಸಹೋದರ ಮುರುಳಿಧರ್ ಶೆಟ್ಟಿ ಮತ್ತು ಸುಧಾಕರ್ ಶೆಟ್ಟಿಯಿಂದ ನಾಲ್ವರಿಂದ ಮಧುಕರ ಶೆಟ್ಟಿಗೆ ಮಧ್ಯಾಹ್ನ 12.15ಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಅದಕ್ಕೂ ಮುನ್ನ ಮರದ ಹಲಗೆ ಮೇಲೆ ಮಧುಕರ್ ಮೃತ ದೇಹವನ್ನು ಇಟ್ಟು, ಅರಶಿಣ ಹಚ್ಚಿ ಸಾಂಪ್ರದಾಯಿಕವಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಹೊಸ ಉಡುಗೆಯನ್ನು ಕುಟುಂಬಸ್ಥರು ತೊಡಿಸಿದ್ದರು. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಂತ್ಯಕ್ರಿಯೆಗೂ ಮುನ್ನ ಅಂತಿಮ ದರ್ಶನಕ್ಕಾಗಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಅಮ್ಮನ ಮನೆಯಂಗಳದಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಭಾರೀ ಜನಸ್ತೋಮ ಸೇರುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಬ್ಯಾರಿ ಗೇಟ್, ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಡಿಜಿಪಿ ನೀಲಮಣಿ ರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದರು.

https://www.youtube.com/watch?v=SE3lzMfihqA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *