ಡಿ.ಕೆ.ಸುರೇಶ್ ಅಭಿಮಾನಿಗಳ ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಲಿಂಕ್

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬೆಂಬಲಿಗರ ‘ಡಿಕೆಎಸ್ ಬ್ರಿಗೇಡ್ ಗ್ರೂಪ್’ನಲ್ಲಿ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಫೋಟೋಗಳು ಶೇರ್ ಆಗಿವೆ.

ರಾಮನಗರ ಜಿಲ್ಲೆಯ ನಾಲ್ಕು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡಿರುವ ಈ ಡಿಕೆಎಸ್ ಬ್ರಿಗೇಡ್ ಗ್ರೂಪ್‍ನಲ್ಲಿ ಅನೇಕ ಅಶ್ಲೀಲ ವಿಡಿಯೋಗಳ ಲಿಂಕ್‍ಗಳನ್ನು ಶೇರ್ ಮಾಡಲಾಗಿದೆ. ಗ್ರೂಪ್‍ನಲ್ಲಿ ಮಹಿಳೆಯರು ಕೂಡ ಇದ್ದಾರೆ. ತಡರಾತ್ರಿ 1 ಗಂಟೆ ಸುಮಾರಿಗೆ ಈ ವಿಡಿಯೋಗಳು ಬರುತ್ತಿವೆ ಅಂತ ಸಾಕಷ್ಟು ಬಾರಿ ಗ್ರೂಪ್ ಅಡ್ಮಿನ್ ವಿರುದ್ಧ ಇತರೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ವಾಟ್ಸಪ್ ಗ್ರೂಪ್‍ನಲ್ಲಿ ಈ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಲೇ ಇವೆ.

ಡಿಕೆಎಸ್ ಬ್ರಿಗೇಡ್ ಗ್ರೂಪ್ ಅಷ್ಟೇ ಅಲ್ಲದೆ ಡಿಕೆಎಸ್ ಅಭಿಮಾನಿಗಳ ಬಳಗ ‘ಟೀಮ್ ಡಿಕೆಎಸ್’, ‘ಡಿಕೆಶಿ ಬಳಗ’ ಸೇರಿದಂತೆ ನಾಲ್ಕಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳಲ್ಲಿ ಇಂತಹ ಅಶ್ಲೀಲ ವಿಡಿಯೋಗಳ ಲಿಂಕ್ ಶೇರ್ ಮಾಡಲಾಗುತ್ತಿದೆ. ಇದರಿಂದಾಗಿ ಅನೇಕರು ಗ್ರೂಪ್‍ನಿಂದ ಹೊರ ನಡೆದಿದ್ದಾರೆ.

ಡಿಕೆಎಸ್ ಬ್ರಿಗೇಡ್ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಸ್ವಾಮಿ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ಯಾವುದೋ ಅನೌನ್ ನಂಬರ್ ರಾತ್ರಿ ವೇಳೆ ಗ್ರೂಪ್‍ಗೆ ಸೇರುತ್ತಿದೆ. ಆ ನಂಬರ್ ಸಂಖ್ಯೆಗಳು ವಿಚಿತ್ರವಾಗಿದ್ದು, ಅದರಿಂದಲೇ ಅಶ್ಲೀಲ ವಿಡಿಯೋ ಲಿಂಕ್ ಹಾಗೂ ಫೋಟೋಗಳು ಗ್ರೂಪ್‍ಗೆ ಬರುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ತೇಜೋವಧೆಗೆ ಹೀಗೆ ಮಾಡುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಗ್ರೂಪ್ ನಲ್ಲಿ ಸೇರಿಕೊಂಡಿರುವ ವಿಚಿತ್ರ ನಂಬರ್ ನಲ್ಲಿ ಮೊದಲ ಮೂರು ಸಂಖ್ಯೆಗಳು ಮಾತ್ರ ಕಾಣಿಸುತ್ತವೆ. ಉಳಿದ ನಂಬರ್ ಗಳು ಡಾಟ್ ಡಾಟ್ ಇರುತ್ತಿದ್ದವು. ಪಕ್ಷ ಸಂಘಟನೆ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು. ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಲಿಂಕ್‍ಗಳು ಹಾಗೂ ಫೋಟೋಗಳು ಶೇರ್ ಆಗಿದ್ದರಿಂದ ಅನೇಕರು ಗ್ರೂಪ್ ನಿಂದ ಹೊರ ಹೋಗಿದ್ದಾರೆ ಎಂದು ಸ್ವಾಮಿ ದೂರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *