ಭಗವಾನ್ ಭದ್ರತೆಗೆ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡ್ತಿದೆ ಸರ್ಕಾರ..!

ಬೆಂಗಳೂರು: ರಾಮ ಮಂದಿರ ಯಾಕೆ ಬೇಡ ಎನ್ನುವ ಪುಸ್ತಕದ ಮೂಲಕ ಹಿಂದೂಗಳ ಆರಾಧ್ಯ ರಾಮ, ಆಂಜನೇಯ, ಸೀತೆಯ ಬಗ್ಗೆ ನಿಂದಿಸಿದ ಪ್ರೊಫೆಸರ್ ಭಗವಾನ್ ಸದ್ಯ ತೀವ್ರ ಚರ್ಚೆಗೀಡಾಗಿದ್ದಾರೆ.

ಭಗವಾನ್ ಭದ್ರತೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದೆ. 2016ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಸಾಹಿತಿಗಳಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಬೇಕೆಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹಿಟ್ ಲಿಸ್ಟ್ ನಲ್ಲಿದ್ದ ಭಗವಾನ್‍ಗೂ ಭದ್ರತೆ ನೀಡಲಾಯಿತು.

ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್‍ಮ್ಯಾನ್ ಇರುತ್ತಾರೆ. ಮೈಸೂರಿನಲ್ಲಿರುವ ಭಗವಾನ್ ಮನೆಗೆ ಸರ್ಕಾರ ಕಡೆಯಿಂದಲೇ ಸಿಸಿಟಿವಿ ಅಳವಡಿಸಲಾಗಿದೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

ಈ ಬಗ್ಗೆ ಭಗವಾನ್ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, “ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇದು ಸರ್ಕಾರ ಮತ್ತು ಸದರಿ ಇಲಾಖೆಗೆ ಬಿಟ್ಟ ವಿಷಯವಾಗಿದೆ. ಸಂವಿಧಾನ ಪ್ರಕಾರವಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಭದ್ರತೆಗೆ ಖರ್ಚು ಆಗುತ್ತಿರುವ ಹಣದ ಬಗ್ಗೆ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯ. ನನಗೆ ಈ ವಿಚಾರದ ಬಗ್ಗೆ ಕೇಳಬೇಡಿ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ರಾಜ್ಯ ಸರ್ಕಾರದ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *