ಸಿಕ್ಸರ್ ಸಿಡಿಸಿದ್ರೆ ಮುಂಬೈ ಇಂಡಿಯನ್ಸ್‌ಗೆ ಬೆಂಬಲ – ರೋಹಿತ್ ಶರ್ಮಾ ಕೆಣಕಿದ ಆಸೀಸ್ ನಾಯಕ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಆಸೀಸ್ ನಾಯಕ ಪೈನೆ, ರೋಹಿತ್ ಶರ್ಮಾರನ್ನು ಕೆಣಕಲು ಯತ್ನಿಸಿದ ಘಟನೆ ನಡೆದಿದೆ.

ಆಸೀಸ್ ತನ್ನ ಸ್ಲೆಡ್ಜಿಂಗ್ ಅಸ್ತ್ರವನ್ನು 3ನೇ ಟೆಸ್ಟ್ ಪಂದ್ಯದಲ್ಲೂ ಪ್ರಯೋಗಿಸಿದ್ದು, ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ರನ್ನು ಪೈನೆ ಈ ಬಾರಿ ಕೆಣಕಿದ್ದಾರೆ.

ಆಸೀಸ್ ಸ್ಪಿನ್ನರ್ ಲಯನ್ ಬೌಲಿಂಗ್ ವೇಳೆ ಪೈನೆ ವಿಕೆಟ್ ಹಿಂದೆ ನಿಂತು ರೋಹಿತ್ ಶರ್ಮಾರನ್ನು ಕೆಣಕುವಂತೆ ಮಾತನಾಡಿದ್ದು, ನೀನು ಸಿಕ್ಸರ್ ಸಿಡಿಸಿದರೆ ನಾನು ಮುಂಬೈ ತಂಡಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಾನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬಗ್ಗೆ ಗೊಂದಲದಲ್ಲಿದ್ದು, ಈಗ ನೀನು ಸಿಕ್ಸರ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿ ಕೆಣಕುವ ಪ್ರಯತ್ನ ಮಾಡಿದ್ದಾರೆ.

ಪೈನೆ ವಿಕೆಟ್ ಹಿಂದೆ ನಿಂತು ಮಾತನಾಡುತ್ತಿರುವ ಸಂಭಾವಣೆ ದಾಖಲಾಗಿದ್ದು, ಪೈನೆ ಮಾತಿಗೆ ಯಾವುದೇ ರೀತಿ ತಲೆ ಕೆಡೆಸಿಕೊಳ್ಳದ ರೋಹಿತ್ ತಮ್ಮ ಬ್ಯಾಂಟಿಂಗ್ ಮುಂದುವರಿಸಿದರು. ಪಂದ್ಯದಲ್ಲಿ 114 ಎತಸೆಗಳನ್ನು ಎದುರಿಸಿದ ರೋಹಿತ್ 5 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಾರ್ಥ್ ಟೆಸ್ಟ್ ವೇಳೆಯೂ ಸ್ಲೆಡ್ಜಿಂಗ್ ಅಸ್ತ್ರವನ್ನೇ ಪ್ರಯೋಗ ಮಾಡಿದ್ದ ಪೈನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮುಖಾಮುಖಿಯಾಗಿ ನಿಂತಿದ್ದರು. ಅಲ್ಲದೇ ಇದೇ ಪಂದ್ಯದಲ್ಲಿ ಮುರಳಿ ವಿಜಯ್ ರನ್ನು ಸ್ಲೆಂಡ್ಜ್ ಮಾಡಿ ಆಟದ ಮೇಲಿನ ಏಕಾಗ್ರತೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *