ಕೆಜಿಎಫ್ ಚಿತ್ರತಂಡದಿಂದ ಯಶೋಯಾತ್ರೆ

ಬೆಂಗಳೂರು: ಕೆಜಿಎಫ್ ಚಿತ್ರತಂಡ ಯಶೋಯಾತ್ರೆ ಕೈಗೊಂಡಿದೆ. ಕೆಜಿಎಫ್ ಯಶ್ವಸ್ಸಿಗೆ ಕಾರಣಕರ್ತರಾದ ಸಿನಿರಸಿಕರಿಗೆ ಧನ್ಯವಾದ ಅರ್ಪಿಸೋದಕ್ಕೆ ಚಿತ್ರತಂಡ ಮುಂದಾಗಿದೆ. ರಾಕಿಂಗ್‍ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್, ಭುವನ್‍ಗೌಡ ಒಟ್ಟಾಗಿ ಹೈದರಬಾದ್ ಕಡೆ ಪಯಣ ಬೆಳೆಸ್ತಿದ್ದು, ಇಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ತಿರುಪತಿಯಲ್ಲಿರುವ ಸಂಧ್ಯಾ ಥಿಯೇಟರ್‍ಗೆ ಭೇಟಿ ನೀಡಲಿದ್ದಾರೆ.

ಅರ್ಧಗಂಟೆಗಳ ಕಾಲ ಅಭಿಮಾನಿಗಳೊಟ್ಟಿಗೆ ಮಾತುಕತೆ ನಡೆಸಿ ನಂತರ ವಿಜಯವಾಡಕ್ಕೆ ತೆರಳುತ್ತಾರೆ. ಸುಮಾರು 12.30ರ ಹೊತ್ತಿಗೆ ವಿಜಯವಾಡದ ಟ್ರೆಂಡ್ ಸೆಟ್ ಮಾಲ್‍ಗೆ ಭೇಟಿ ಕೊಟ್ಟು ಸಿನಿರಸಿಕರ ಜೊತೆ ಸಕ್ಸಸ್ ಸಂಭ್ರಮವನ್ನ ಹಂಚಿಕೊಳ್ಳಲಿದ್ದಾರೆ. 4 ಗಂಟೆಗೆ ವೈಜಾಗ್‍ನ ಶರತ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಪ್ರೇಕ್ಷಕಬಂಧುಗಳಿಗೆ ಧನ್ಯವಾದ ಅರ್ಪಿಸಲಿದ್ದಾರೆ.

ಕೆಜಿಎಫ್. ಇಡೀ ಜಗತ್ತನ್ನೇ ಕನ್ನಡ ಸಿನಿಮಾ ರಂಗದ ನೋಡುವಂತೆ ಮಾಡಿದ ಮಾಸ್ಟರ್ ಪೀಸ್. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಪಂಚ ಭಾಷೆಗಳಲ್ಲೂ ಸಿನಿ ರಸಿಕರು ಸಲಾಂ ರಾಕಿಭಾಯ್ ಅಂತಿದ್ದಾರೆ. ಬಾಕ್ಸ್ ಆಫೀಸ್‍ನಲ್ಲಿ ರಾಜಾಹುಲಿಯಂತೆ ಘರ್ಜಿಸುತ್ತಿದೆ. ಕೆಜಿಎಫ್ ನಾಲ್ಕನೇ ದಿನಕ್ಕೆ 75 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಇಲ್ಲಿಯವರೆಗೆ ಯಾವುದೇ ಕನ್ನಡ ಸಿನಿಮಾ 100 ಕೋಟಿ ರೂಪಾಯಿ ಗಳಿಸಿರಲಿಲ್ಲ. ಹೀಗಾಗಿ ಕೆಜಿಎಫ್ ಗಳಿಕೆ ಹೊಸ ಇತಿಹಾಸ ಬರೆದಿದೆ. ಇದನ್ನೂ ಓದಿ : ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

88 ವರ್ಷಗಳ ಇತಿಹಾಸ ಇರುವ ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಥಿಯೇಟರ್‍ನಲ್ಲಿ ಪ್ರದರ್ಶನಗೊಳ್ಳಲಿರುವ ಕಟ್ಟಕಡೆಯ ಸಿನಿಮಾನೇ ಕೆಜಿಎಫ್. ಡಿಸೆಂಬರ್ 31ಕ್ಕೆ ರೆಕ್ಸ್ ಥಿಯೇಟರ್ ನಲ್ಲಿ ಕಟ್ಟ ಕಡೆಯ ಸಿನಿಮಾ ಪ್ರದರ್ಶನಗೊಳ್ಳಲಿದೆ. ಹೀಗಾಗಿ ಕೆಜಿಎಫ್ ತಂಡ ಥಿಯೇಟರ್ ಗೆ ಭೇಟಿ ನೀಡಿತ್ತು. ಇದನ್ನೂ ಓದಿ : ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

ರಾಕಿ ಭಾಯ್ ಇಲ್ಲಿಯವರೆಗೆ ಗಳಿಸಿದ್ದೆಷ್ಟು?
* ‘ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ.
* ಎರಡನೇ ದಿನದ ಕೆಜಿಎಫ್ ಟೋಟಲ್ ಕಲೆಕ್ಷನ್ ಸುಮಾರು 40 ಕೋಟಿ ರೂ.
* ಮೂರನೇ ದಿನಕ್ಕೆ ‘ಕೆಜಿಎಫ್’ ಒಟ್ಟಾರೆ ಕಲೆಕ್ಷನ್ 58 ಕೋಟಿ ರೂ.
* ಕೆಜಿಎಫ್ ಚಿತ್ರ ನಾಲ್ಕನೇ ದಿನಕ್ಕೆ ದಾಟಿತ್ತು 77 ಕೋಟಿ ರೂ.
* ಐದನೇ ದಿನ ನೂರು ಕೋಟಿ ರೂ. ಗಡಿ ದಾಟಿದ ಕೆಜಿಎಫ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *