ಕೆಜಿಎಫ್ ಚಿತ್ರ ನೋಡಿ ಯಶ್ ನಟನೆಗೆ ಮನಸೋತ ಬಾಲಿವುಡ್ ನಟಿ

ಬೆಂಗಳೂರು: ವಿಶ್ವಾದ್ಯಂತ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾಗೆ ಬಾಲಿವುಡ್ ನಟಿ ರವೀನಾ ಟಂಡನ್ ಮನ ಸೋತಿದ್ದಾರೆ.

ಕೆಜಿಎಫ್ ಸಿನಿಮಾವನ್ನು ನಟಿ ರವೀನಾ ಟಂಡನ್ ಅವರು ವೀಕ್ಷಿಸಿ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಮನಸೋತು ಟ್ವಿಟ್ಟರಿನಲ್ಲಿ ಮೆಚ್ಚುಗೆಯ ಮತುಗಳನ್ನಾಡಿದ್ದಾರೆ.

ಟ್ವೀಟ್ ನಲ್ಲೇನಿದೆ..?
ಕೆಜಿಎಫ್ ಚಿತ್ರದ ಪೋಸ್ಟರ್ ಹಾಕಿರುವ ರವೀನಾ, “ಈ ಸಿನಿಮಾವನ್ನು ಎಲ್ಲರೂ ನೋಡಲೇಬೇಕು.  ದೇಶ್ಯಾದ್ಯಂತ ಈ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಯಶ್, ನೀವು ಅದ್ಭುತವಾಗಿ ನಟಿಸಿದ್ದೀರಾ ಎಂದು ಟ್ವೀಟ್ ಮಾಡಿದ್ದಾರೆ.

ರವೀನಾ ಅವರ ಟ್ವೀಟ್‍ಗೆ ಯಶ್ ಪ್ರತಿಕ್ರಿಯಿಸಿ, ತುಂಬಾ ಧನ್ಯವಾದಗಳು ಮೇಡಂ. ನಿಮ್ಮ ಟ್ವೀಟ್ ಓದಲು ನನಗೆ ಹೆಮ್ಮೆಯಾಗುತ್ತಿದೆ. ಅನಿಲ್ ತದಾನಿ ಸರ್ ಕೆಜಿಎಫ್ ಸಿನಿಮಾವನ್ನು ಸಾಕಷ್ಟು ಸಪೋರ್ಟ್ ಮಾಡಿದ್ದಾರೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *