ಮೈಸೂರು: ವ್ಯಕ್ತಿಯೊಬ್ಬ ಹಾವನ್ನು ರಕ್ಷಣೆ ಮಾಡಿ ಅದನ್ನು ಕಾಡಿಗೆ ಬಿಡುವ ವೇಳೆ ಕಚ್ಚಿ ಪ್ರಾಣ ತೆಗೆದ ಘಟನೆಯೊಂದು ಮೈಸೂರಿನ ನಂಜನಗೂಡಿನ ನೇರಳೆ ಗ್ರಾಮದಲ್ಲಿ ನಡೆದಿದೆ.
ಕೃಷ್ಣ ಹಾವಿನ ರಕ್ಷಣೆಗೆಂದು ಬಂದು ಮೃತಪಟ್ಟ ವ್ಯಕ್ತಿ. ಗ್ರಾಮದ ಮನೆಯಲ್ಲಿ ಶನಿವಾರ ತಡರಾತ್ರಿ ನಾಗರಹಾವು ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಮನೆಮಂದಿ ಕೃಷ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ಅವರು ನಾಗರಹಾವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಹಾವನ್ನು ಗ್ರಾಮದಿಂದ ಹೊರಗೆ ಬಿಡಲು ತೆರಳಿದ್ದಾರೆ.
ಹಾವನ್ನು ಕಾಡಿಗೆ ಬಿಡುವ ವೇಳೆ ಅದು ಕೃಷ್ಣನ ಕಾಲಿಗೆ ಕಚ್ಚಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಮತ್ತೆ ಭಾನುವಾರ ಬೆಳಗ್ಗೆ ಹಾವು ಗ್ರಾಮದೊಳಗೆ ಮರಳಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾವನ್ನು ಹೊಡೆದು ಸಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply