ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುವುದಕ್ಕೆ ತಾಜಾ ಉದಾಹರಣೆ ಲಭಿಸಿದ್ದು, ಅಮೆರಿಕದಲ್ಲಿ ಧೋನಿ ಅಭಿಮಾನಿಯೊಬ್ಬರು ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರನ್ನು ಬರೆದುಕೊಂಡಿದ್ದಾರೆ.
ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಅಭಿಮಾನಿ ತಮ್ಮ ಕಾರಿನ ಹಿಂಭಾಗದ ನಂಬರ್ ಪ್ಲೇಟ್‍ನಲ್ಲಿ ಧೋನಿ ಹೆಸರನ್ನು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಪ್ರತಿಕ್ರಿಯೆ ನೀಡಿ ಅಮೆರಿಕದ ಲಾಸ್ ಏಂಜಲೀಸ್‍ನಲ್ಲೂ ಧೋನಿ ಅಭಿಮಾನಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ನನ್ನ ಸ್ನೇಹಿತ ಈ ಫೋಟೋವನ್ನು ತೆಗೆದಿದ್ದಾನೆ. ಕಾರು ಯಾರದ್ದೇ ಆಗಿದ್ದರು, ಆತ ಧೋನಿಯ ಬಹುದೊಡ್ಡ ಅಭಿಮಾನಿ ಎಂದು ತಿಳಿಯುತ್ತದೆ ಎಂದು ಮಯಾಂಕ್ ಮೊಂದಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಾತೆಗೆ ಟ್ಯಾಗ್ ಮಾಡಿದ್ದರು.
Aaah, so the legendary Soppanasundhari is now in LA! #WhistlePodu #Thala 💛😋🦁 https://t.co/wUHiaUWqQW
— Chennai Super Kings (@ChennaiIPL) December 20, 2018
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವರು ಇದೇ ರೀತಿ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರುಳ್ಳ ಕಾರುಗಳ ಫೋಟೋಗಳನ್ನು ಹಾಕಿದ್ದಾರೆ. ಇದೇ ಟ್ವೀಟ್‍ಗೆ ರೀಟ್ವೀಟ್ ಮಾಡಿಕೊಂಡ ಸಿಎಸ್‍ಕೆ ತಂಡ, ವಾವ್, ಲೆಜೆಂಡ್ರಿ ಸೊಪ್ಪನಸುಂದರಿ ಈಗ ಲಾಸ್ ಏಂಜಲೀಸ್ ನಲ್ಲಿದ್ದಾಳೆ ಎಂದು ಬರೆದು #WhistlePodu #Thala ಹ್ಯಾಷ್ ಟ್ಯಾಗ್ ಬಳಸಿ ಪ್ರತಿಕ್ರಿಯೆಯನ್ನ ನೀಡಿದೆ.
ಎರಡು ವರ್ಷಗಳ ಬಳಿಕ ಐಪಿಎಲ್ ಆಡಿದ್ದ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿ ಐಪಿಎಲ್ ಕಪ್ ಗೆದ್ದಿತ್ತು, ಇದರೊಂದಿಗೆ ಮೂರು ಬಾರಿ ಕಪ್‍ಗೆ ಮುತ್ತಿಟ್ಟ ಸಾಧನೆ ಮಾಡಿತ್ತು. ಈ ಬಾರಿಯೂ ಕೂಡ ಹಲವು ಅಭಿಮಾನಿಗಳ ಫೇವರಿಟ್ ಚೆನ್ನೈ ತಂಡವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply