ರಹಸ್ಯ ಸ್ಥಳಕ್ಕೆ ತೆರೆಳಿದ್ರಾ ರಮೇಶ್ ಜಾರಕಿಹೊಳಿ..?

ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದೆ ಅವರು ಸೈಲೆಂಟ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟ ರಮೇಶ್ ಜಾರಕಿಹೊಳಿ, ಈವರೆಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡು ಫೋನ್ ಸಂಪರ್ಕಕ್ಕೂ ಸಿಗದೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ನಡೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಯಾರ ಕೈಗೂ ಸಿಗದೆ ಫೋನ್ ಸಂಪರ್ಕಕ್ಕೂ ಸಿಗದ ರಮೇಶ್ ಜಾರಕಿಹೊಳಿ ಬೇರೆ ಏನಾದರೂ ಕಾರ್ಯ ತಂತ್ರ ಮಾಡುತ್ತಿದ್ದಾರಾ ಅಂತ ಅನುಮಾನ ಎದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹಾಗೂ ರಮೇಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ ಈಗ ರಮೇಶ್ ಜಾರಕಿಹೊಳಿ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಹಲವಾರು ಅನುಮಾನ ಸೃಷ್ಟಿಸಿದೆ. ಅವರು ವಿಮಾನದಲ್ಲಿ ಪ್ರಯಾಣಿಸಿದ್ರಾ? ಇಲ್ಲಾ ಮನ ಬದಲಾಯಿಸಿಕೊಂಡು ವಾಪಸ್ ಹೋದ್ರಾ? ಎಲ್ಲ ಪಕ್ಷವನ್ನು ಬಿಡುವ ನಿರ್ಧಾರ ಮಾಡಿದ್ದಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಮಾಧ್ಯಮಗಳಿಂದ ದೂರ ಉಳಿಯಲು ರಮೇಶ್ ಜಾರಕಿಹೊಳಿಗೆ ಆಪ್ತರು ಸೂಚಿಸಿದ್ದಾರೆ. ಸದ್ಯ ಗೋಕಾಕ್‍ನಲ್ಲಿರುವ ಮನೆಯಲ್ಲೂ ಇಲ್ಲದೆ ಯಾರ ಕೈಗೂ ಅವರು ಸಿಗುತ್ತಿಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರು ಬೇಸರಗೊಂಡು ಈ ರೀತಿ ಯಾರ ಕಣ್ಮುಂದೆಯೂ ಬರದೆ ಕಣ್ಮರೆಯಾಗಿದ್ದಾರಾ ಎನ್ನುವ ಚರ್ಚೆಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *