ಯಶ್‍ಗೆ ಶುಭಕೋರಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಬಳ್ಳಾರಿ: ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ಚಿತ್ರತಂಡಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಾಶಯ ತಿಳಿಸಿದ್ದು, ಯಶ್ ಅವರು ವಿಶ್ವದ ಹೆಮ್ಮೆಯ ನಾಯಕ ನಟರಾಗಿ ಹೊರಹೊಮ್ಮಲಿ ಅಂತ ಆಶೀರ್ವದಿಸಿದ್ದಾರೆ.

ಪೋಸ್ಟ್ ನಲ್ಲೇನಿದೆ..?
“ಕನ್ನಡ ಚಿತ್ರರಂಗ ಸದ್ಯ ವಿಶ್ವದ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ನಾಳೆ(ಅಂದರೆ ಶುಕ್ರವಾರ) ತೆರೆ ಕಾಣತ್ತಿರುವ ಕೆಜಿಎಫ್ ಚಿತ್ರವಾಗಿದೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಯಶ್ ಈ ಚಿತ್ರದ ನಾಯಕರಾಗಿರುವುದು ಸಂತಸ ತಂದಿದೆ. ಸಹೋದರ ಯಶ್ ಅವರಿಗೆ ಶುಭವಾಗಲಿ. ಈ ಚಿತ್ರ ದೇಶಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.

ಕೆಜಿಎಫ್ ಕನ್ನಡಿಗರ ಮನ ಗೆಲ್ಲಲಿ. ಚಿತ್ರ ತಂಡಕ್ಕೆ ಶುಭವಾಗಲಿ. ಕೆಜಿಎಫ್ ಚಿತ್ರದ ಮೇಲೆ ಸಮಸ್ತ ಕನ್ನಡಿಗರ ಶುಭ ಹಾರೈಕೆ ಇರಲಿ. ಈ ಚಿತ್ರ ಅದ್ಧೂರಿಯಾಗಿ ತೆರೆ ಕಂಡು ಯಶ್ ಅವರು ವಿಶ್ವದ ಹೆಮ್ಮೆಯ ನಾಯಕ ನಟರಾಗಿ ಹೊರಹೊಮ್ಮಲಿ ಎಂದು ಈ ಶುಭ ಸಂದರ್ಭದಲ್ಲಿ ಹೃದಯ ತುಂಬಿ ಹಾರೈಸುವೆ” ಎಂದು ಬರೆದುಕೊಂಡಿದ್ದಾರೆ.

‘ಕೆಜಿಎಫ್’ ಸಿನಿಮಾ ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ಇಂದು ತೆರೆ ಕಂಡಿದೆ. ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *