ಪತಿ ರಣ್‍ವೀರ್ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿ ಅತ್ತ ದೀಪಿಕಾ: ವಿಡಿಯೋ

ಮುಂಬೈ: ರಣ್‍ವೀರ್ ಮಾತುಗಳನ್ನು ಕೇಳಿ ದೀಪಿಕಾ ಪಡುಕೋಣೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾವುಕರಾದರು.

ಭಾನುವಾರ ರಣ್‍ವೀರ್ ಹಾಗೂ ದೀಪಿಕಾ ಮುಂಬೈನಲ್ಲಿ ನಡೆದ ಸ್ಟಾರ್ ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೆಡ್ ಕಾರ್ಪೆಟ್ ಮೇಲೆ ರಣ್‍ವೀರ್ ಹಾಗೂ ದೀಪಿಕಾ ಕಪ್ಪು ಬಣ್ಣದ ಉಡುಪನ್ನು ಧರಿಸಿ ಮಿಂಚಿದರು.

ಈ ಅವಾರ್ಡ್ ಕಾರ್ಯಕ್ರಮದಲ್ಲಿ ರಣ್‍ವೀರ್ ‘ಪದ್ಮಾವತ್’ ಚಿತ್ರಕ್ಕೆ ಅತ್ಯುತ್ತಮ ನಾಯಕ ಪ್ರಶಸ್ತಿಯನ್ನು ಪಡೆದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಿ ರಣವೀರ್ ಸಿಂಗ್ ಎಲ್ಲರ ಗಮನ ಸೆಳೆದಿದ್ದರು.

ರಣ್‍ವೀರ್ ವೇದಿಕೆ ಮೇಲೆ ಹೋಗಿ ಅವಾರ್ಡ್ ಪಡೆದು ಭಾವನಾತ್ಮಕವಾಗಿ ಮಾತನಾಡಿದರು. “ನನಗೆ ಚಿತ್ರದಲ್ಲಿ ರಾಣಿ ಸಿಗದೇ ಇದ್ದರೂ ನಿಜ ಜೀವನದಲ್ಲಿ ನನಗೆ ನನ್ನ ರಾಣಿ ಸಿಕ್ಕಿದ್ದಾಳೆ. ಈ 6 ವರ್ಷದಲ್ಲಿ ನಾನು ಏನೂ ಸಾಧನೆ ಮಾಡಿದ್ದೇನೋ ಅದಕ್ಕೆ ದೀಪಿಕಾ ಕಾರಣ. ಲವ್ ಯೂ ದೀಪಿಕಾ” ಎಂದು ಪತ್ನಿಗೆ ಧನ್ಯವಾದ ತಿಳಿಸಿದರು. ರಣವೀರ್ ಮಾತನ್ನು ಹೇಳುತ್ತಿದ್ದಾಗ ದೀಪಿಕಾ ಪಡುಕೋಣೆ ಭಾವುಕರಾಗಿ ಪತಿಯನ್ನೇ ನೋಡುತ್ತಿದ್ದರು.

ದೀಪಿಕಾ ಅವರಿಗೆ ಧನ್ಯವಾದ ಹೇಳಿದ ನಂತರ ರಣ್‍ವೀರ್ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ತನ್ನ ತಂದೆ, ತಾಯಿ ಹಾಗೂ ಸಹೋದರಿಗೆ ಧನ್ಯವಾದ ತಿಳಿಸಿದರು. ಬಳಿಕ ಈ ವರ್ಷದಲ್ಲಿ ನಿಧನರಾದ ತನ್ನ ಅಜ್ಜಿಗೆ ರಣ್‍ವೀರ್ ಈ ಅವಾರ್ಡ್ ಅನ್ನು ಡೆಡಿಕೇಟ್ ಮಾಡಿದರು.

ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

https://twitter.com/RanveerSinghtbt/status/1074354641926848513

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *