ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು..!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತು ಮಾರಮ್ಮ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು ಸಿಕ್ಕಿದೆ.

ದೇವಸ್ಥಾನಕ್ಕೆ ವರ್ಷಕ್ಕೆ ಬರೋಬ್ಬರೀ 80 ಲಕ್ಷ ರೂಪಾಯಿ ಆದಾಯ ಇತ್ತು. 1.5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದಲ್ಲಿ ಗೋಪುರ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವಿಚಾರದಲ್ಲಿ ಸ್ವಾಮೀಜಿ ಮತ್ತು ದೇವಸ್ಥಾನದ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಇತ್ತು. ದುರಂತದ ದಿನ ನಡೆದಿದ್ದ ಗುದ್ದಲಿ ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದರು ಎಂದು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಗೋಪುರ ಗುದ್ದಲಿ ಪೂಜೆಗೆ ಕಿರಿಯ ಸ್ವಾಮೀಜಿ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಬಂದಿರಲಿಲ್ಲ. ಸಾಲೂರು ಮಠದ ಕಿರಿಯ ಸ್ವಾಮೀಜಿ ಚಿನ್ನಪ್ಪಿ ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಕ್ಕೂ ಬರುತ್ತಿದ್ದರು. ಆದ್ರೆ ಅಂದು ಅವರು ಬಂದಿರಲಿಲ್ಲ. ಹೀಗಾಗಿ ಹಿರಿಯ ಸ್ವಾಮೀಜಿ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನಡೆದಿತ್ತು. ಆದರೆ ಪೂಜೆ ನಡೆದ ಬಳಿಕ ಹಿರಿಯ ಸ್ವಾಮೀಜಿಯೂ ಪ್ರಸಾದ ಸ್ವೀಕರಿಸಿದೆ ಹೋಗಿದ್ದರು ಎಂದು ತಿಳಿದುಬಂದಿದೆ.

ಇಮ್ಮಡಿ ಮಹಾದೇವಸ್ವಾಮಿ ಮತ್ತು ಸಾಲೂರು ಮಠದ ಕಿರಿಯ ಸ್ವಾಮೀಜಿ ಬೇರೆ ಬೇರೆಯಾಗಿದ್ದು, ಆದರೆ ಸಾಲೂರು ಮಠಕ್ಕೂ ಈ ದೇವಾಲಕ್ಕೂ ಯಾವುದೇ ಸಂಬಂಧ ಇಲ್ಲ. ಇಮ್ಮಡಿ ಮಹಾದೇವಸ್ವಾಮಿ ದೋಣಿಕೆರೆ ಮಠದವರಾಗಿದ್ದಾರೆ. ಈ ದೋಣಿಕೆರೆ ಮಠಕ್ಕೂ ಮಾರಮ್ಮ ದೇವಾಲಯಕ್ಕೂ ಸಂಬಂಧ ಇದೆ. ಈ ಹಿಂದೆ ದೋಣಿಕೆರೆ ಮಠದ ಅರ್ಚಕರು ಮಾರಮ್ಮನ ಪೂಜೆ ಮಾಡುತ್ತಿದ್ದರು. ಆದರೆ 50 ವರ್ಷಗಳ ಹಿಂದೆ ನಾವು ಪೂಜೆ ಮಾಡಲ್ಲ ಎಂದು ಹೊರಟು ಹೋಗಿರುತ್ತಾರೆ. ಬಳಿಕ ಸ್ಥಳೀಯರು, ಚಿನ್ನಪ್ಪಿ ಹಾಗೂ ಇತರರು ಸೇರಿ ಒಂದು ಟ್ರಸ್ಟ್ ಮಾಡಿ ಅವರೇ ಪೂಜೆ ಮಾಡಿಕೊಂಡು ಬರುತ್ತಿದ್ದರು.

ಹೀಗೆ ಪೂಜೆ ಮಾಡಲು ಶುರು ಮಾಡಿದಾಗ ದೇವಾಲಯಕ್ಕೆ ಆದಾಯ ಹೆಚ್ಚಾಗಿತ್ತು. ನಂತರ ಮತ್ತೆ ದೋಣಿಕೆರೆ ಅರ್ಚಕರು ಬಂದು ನಾವೇ ಪೂಜೆ ಮಾಡುತ್ತೇವೆ ಬಿಟ್ಟುಕೊಡಿ ಎಂದು ಕೇಳಿದ್ದರು. ಆಗ ಸ್ಥಳೀಯರು ಇಲ್ಲ ನಾವೇ ಪೂಜೆ ಮಾಡುತ್ತಿದ್ದೇವೆ. ನೀವು ಒಂದು ವಾರಕ್ಕೆ ಬಂದು ಪೂಜೆ ಮಾಡಿ ಅಂತ ಹೇಳಿದ್ದರು. ಈ ವಿಚಾರಕ್ಕೆ ಆಗಾಗ ಮಾತುಕತೆ ನಡೆಯುತ್ತಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಗುರುಸ್ವಾಮಿ ಸ್ಪಷ್ಟನೆ:
ದೇವಾಲಯದಲ್ಲಿ ಕಟ್ಟಡ ಕಟ್ಟುತ್ತಿದ್ದೇವೆ ನೀವು ಬನ್ನಿ ಎಂದು ಕರೆದಿದ್ದರು. ಅಂದು ಶುಕ್ರವಾರ ಆಗಿದ್ದರಿಂದ ನಮ್ಮ ಮಠದಲ್ಲೂ ಭಕ್ತರು ಹೆಚ್ಚಾಗಿದ್ದರು. ಕೊನೆಗೆ ಪೂಜೆ ಮುಗಿಸಿ ಮಾರಮ್ಮನ ದೇವಾಲಯಕ್ಕೆ ಹೋಗಿದ್ದೆ. ಆದರೆ ನಾನು ಹೋಗುವಷ್ಟರಲ್ಲಿ ಪೂಜೆ ಮುಗಿದಿತ್ತು. ಮತ್ತೆ ನಾನು ಕೂಡ ಪೂಜೆ ಮಾಡಿಸಿದೆ. ಬಳಿಕ ದೇವಾಲಯ ಕಂಟ್ರಾಕ್ಟರ್ ಸದಸ್ಯರ ಬಳಿ ಹೋಗಿ, ನೀವೇ ದೇವಸ್ಥಾನವನ್ನು ನಿರ್ಮಿಸಿ ಬೇರೆ ಯಾರಿಗೂ ವಹಿಸಬೇಡಿ ಎಂದು ಹೇಳಿ ನಾನು ಮಠಕ್ಕೆ ಬಂದೆ ಎಂದು ಹೇಳಿದ್ದಾರೆ.

ನಾನು ಯಾವ ದೇವಾಸ್ಥಾನಕ್ಕೂ ಹೋದರು ಪ್ರಸಾದ ಸ್ವೀಕರಿಸುವುದಿಲ್ಲ. ನಾವೇ ಬೇರೆ ಮಾಡಿಕೊಳ್ಳುತ್ತೇವೆ. ಇಲ್ಲ ನಮಗೆ ಅಂತ ಬೇರೆ ಮನೆಯಲ್ಲಿ ಪ್ರಸಾದ ಮಾಡಿಸಿದ್ದರೆ ಅಲ್ಲಿ ಹೋಗಿ ತಿನ್ನುತ್ತೇವೆ. ಆದ್ದರಿಂದ ಅಂದಿನ ದಿನ ಕೂಡ ನಾನು ದೇವಾಲಯದಲ್ಲಿ ಪ್ರಸಾದ ತಿಂದಿಲ್ಲ. ದೇವಸ್ಥಾನಕ್ಕೆ ನಮಗೂ ಗುರು-ಶಿಷ್ಯರ ಸಂಬಂಧ ಇದ್ದಂತೆ. ನಾನು ಪೂಜೆಗೆ ಹೋಗಿ ವಾಪಸ್ ಮಠಕ್ಕೆ ಬಂದೆ ಎಂದು ಗುರುಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *