ದಾವಣಗೆರೆ: ಗ್ರಾಹಕರ ಸೋಗಿನಲ್ಲಿ ಬಂದು 25 ಸಾವಿರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ ಘಟನೆ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ನಡೆದಿದೆ.
ಮೊಬೈಲ್ ಕಳ್ಳತನ ಮಾಡಿದ ಕಳ್ಳನ ಕೈ ಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಹಕರ ಸೋಗಿನಲ್ಲಿ ಬಂದು ಬಟ್ಟೆ ತೆಗೆದುಕೊಳ್ಳುವುದಾಗಿ ಹೇಳಿ ಬಟ್ಟೆಗಳನ್ನು ನೋಡುತ್ತಿದ್ದರು. ಅಲ್ಲದೇ ಪಕ್ಕದಲ್ಲೇ ಇದ್ದ ಟೇಬಲ್ ಮೇಲೆ ಯುವತಿಯೊಬ್ಬಳು ಮೊಬೈಲ್ ಇಟ್ಟು ಶಾಪಿಂಗ್ ಮಾಡುತ್ತಿದ್ದಳು.

ಇದನ್ನು ನೋಡಿದ ಚಾಲಾಕಿ ಕಳ್ಳ ಗ್ರಾಹಕರ ಹಾಗೂ ಸಿಬ್ಬಂದಿಯ ಗಮನ ಬೇರೆ ಕಡೆ ಸೆಳೆದು ಟೇಬಲ್ ಮೇಲಿದ್ದ ಮೊಬೈಲ್ ಕದ್ದು ಕ್ಷಣವೂ ನಿಲ್ಲದೇ ಶಾಪಿಂಗ್ ಮಾಲ್ ನಿಂದ ಹೊರ ನಡೆದಿದ್ದಾನೆ. ಮೊಬೈಲ್ ಕಳ್ಳತನ ಮಾಡಿ ಹೊರಗಡೆ ಕಾಲ್ಕಿತ್ತ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply