ಮದ್ವೆ ಬಳಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ತನ್ನ ಪ್ಲಾನ್ ಬಿಚ್ಚಿಟ್ಟ ರಣ್‍ವೀರ್

ಮುಂಬೈ: ಬಾಲಿವುಡ್‍ನ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ನವೆಂಬರ್ 14 ಮತ್ತು 15 ರಂದು ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು, ವಿವಾಹದ ಬಳಿಕ ಮೊದಲ ಬಾರಿಗೆ ರಣ್‍ವೀರ್ ಸಿಂಗ್ ಮಾತನಾಡಿದ್ದಾರೆ.

ನಟ ರಣ್‍ವೀರ್ ಸಿಂಗ್ ಶುಕ್ರವಾರ ಸಮಾರಂಭವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ಮದುವೆ, ಸಿನಿಮಾಗಳು, ಚಿತ್ರರಂಗದಲ್ಲಿ ಮೀಟೂ ಚಳುವಳಿ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ರಣವೀರ್ ದೀಪಿಕಾ ಪಡುಕೋಣೆ ಅವರೊಂದಿಗಿನ ಸಂಬಂಧದ ಬಗ್ಗೆ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ಸಮಾರಂಭದಲ್ಲಿ ಮದುವೆ ಬಳಿಕ ಮಕ್ಕಳನ್ನು ಪಡೆಯುವ ಬಗ್ಗೆ ಒತ್ತಡ ಇದ್ಯಾ ಎಂಬ ಪ್ರಶ್ನೆ ಹೇಳಿದ್ದಾರೆ. ಇದಕ್ಕೆ ನಕ್ಕು ಉತ್ತರಿಸಿದ ರಣ್‍ವೀರ್, ಮಕ್ಕಳ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಇದು ನನ್ನ ನಿರ್ಧಾರವಲ್ಲ. ಅದು ದೀಪಿಕಾಗೆ ಸಂಬಂಧಿಸಿದ್ದು, ಇದರಲ್ಲಿ ಆಕೆಯ ನಿರ್ಧಾರವೇ ಅಂತಿಮವಾಗಿರುತ್ತದೆ. ಏಕೆಂದರೆ ನಮ್ಮ ಜೀವನದ ಬಗ್ಗೆ ದೀಪಿಕಾ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಹೇಳಿದ್ದಾರೆ.

ಆಕೆಯನ್ನು ಮದುವೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ದೀಪಿಕಾ ಎಲ್ಲದರಲ್ಲೂ ತುಂಬಾ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಷ್ಟೇ ಅಲ್ಲದೇ ಆಕೆ ಜವಾಬ್ದಾರಿಯುತ ವ್ಯಕ್ತಿ ಎಂದು ಪತ್ನಿಯನ್ನು ರಣ್‍ವೀರ್ ಹೊಗಳಿದ್ದಾರೆ.

ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ರಣ್‍ವೀರ್ ಸಿಂಗ್ ಇಬ್ಬರ ನಡುವಿನ ಭಾಂದವ್ಯದ ಬಗ್ಗೆ ಮಾತನಾಡಿದ್ದರು. ದೀಪಿಕಾ ನಾನು 6 ತಿಂಗಳಿನಿಂದ ರಿಲೆಷನ್‍ಶಿಪ್‍ನಲ್ಲಿದ್ದು, ತನ್ನ ಮಕ್ಕಳಿಗೆ ದೀಪಿಯಾ ಒಳ್ಳೆಯ ತಾಯಿಯಾಗುತ್ತಾಳೆ ಎಂದು ಹೇಳಿದ್ದರು.

ದೀಪಿಕಾ ಮತ್ತು ರಣವೀರ್ ಜೋಡಿಯ ಮೊದಲ ಸಿನಿಮಾ ‘ಗೋಲಿಯೋಂ ಕೀ ರಾಸ್‍ಲೀಲಾ- ರಾಮ್‍ಲೀಲಾ’ 2013ರ ನವೆಂಬರ್ 15 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಯಾದ ದಿನವೇ ಈ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *