ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ನಡೆದಿದ್ದು, ಮದುವೆಯಲ್ಲಿ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆ ಧರಿಸಿದ್ದು ವಿಶೇಷವಾಗಿತ್ತು.

ಮದುವೆಯಲ್ಲಿ ಇಶಾ ಹಾಫ್ ವೈಟ್ ಬಣ್ಣದ ಲೆಹೆಂಗಾ ಧರಿಸಿದ್ದರು. ಆನಂದ್ ಕೂಡ ಇಶಾರನ್ನು ಮ್ಯಾಚ್ ಮಾಡಲು ಹಾಫ್ ವೈಟ್ ಬಣ್ಣದ ಶೆರ್ವಾನಿ ಧರಿಸಿ ಮಿಂಚಿದ್ದರು. ಈ ಲೆಹೆಂಗಾ ಮೇಲೆ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆಯನ್ನು ದುಪ್ಪಟಾ ರೀತಿಯಲ್ಲಿ ಹಾಕಿಕೊಂಡಿದ್ದರು.

ಇಶಾ ತನ್ನ ವೈಟ್ ಹಾಫ್ ಲೆಹೆಂಗಾ ಮೇಲೆ ತಮ್ಮ ಹಳೆಯ ಕೆಂಪು ಸೀರೆಯನ್ನು ದುಪ್ಪಟಾ ಸ್ಟೈಲಿನಲ್ಲಿ ಧರಿಸಲು ತಾಯಿ ನೀತಾ ಅಂಬಾನಿ ಸಲಹೆ ನೀಡಿದ್ದರು. ಇಶಾ ಕೂಡ ತನ್ನ ತಾಯಿಯ ಮಾತನ್ನು ಕೇಳಿ ಸೀರೆಯನ್ನು ದುಪ್ಪಟಾ ರೀತಿ ಧರಿಸಿದ್ದರು.

ಇಶಾ ತನ್ನ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾದಲ್ಲಿ 16 ಮೊಗ್ಗುಯಿದ್ದು, ಪ್ರತಿಯೊಂದು ಮೊಗ್ಗಿನ ಮೇಲೆ ಜರ್ದೋಝಿ ಹಾಗೂ ಮುಕೇಶ್ ವರ್ಕ್ ಮಾಡಲಾಗಿತ್ತು. ಇಶಾ ಧರಿಸಿದ್ದ ಲೆಹೆಂಗಾವನ್ನು ಕೈಯಿಂದಲೇ ಕಸೂತಿ ಮಾಡಲಾಗಿದೆ. ಲೆಹೆಂಗಾದಲ್ಲಿದ್ದ ಫ್ಲೋರಲ್ ಜಾಲಿಯನ್ನು ಕ್ರಿಸ್ಟಲ್ ಹಾಗೂ ಸೀಕ್ವೆನ್ಸ್ ನಿಂದ ಹೈಲೈಟ್ ಮಾಡಲಾಗಿದೆ.

ಇಶಾ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಖ್ಯಾತ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಕೊಸಲಾ ಡಿಸೈನ್ ಮಾಡಿದ್ದಾರೆ. ಇಂದು ಇಶಾ ಹಾಗೂ ಆನಂದ್ ಅವರ ರಾಯಲ್ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯಲ್ಲಿ ಬಾಲಿವುಡ್ ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *