ಅಂಗಾಂಗ ದಾನ ಮಾಡಲು ಮುಂದಾದ ಅಂಬಿ ಅಭಿಮಾನಿ

ಮೈಸೂರು: ದಿವಂಗತ ಹಿರಿಯ ನಟ ಅಂಬರೀಶ್ ಅಭಿಮಾನಿ ತನ್ನ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಅಂಬಿ ಪುಣ್ಯಸ್ಮರಣೆ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ನಿವಾಸಿ ನಂದೀಶ್ ತಮ್ಮ ಅಂಗಾಂಗಗಳ ದಾನಕ್ಕೆ ಮುಂದಾಗಿದ್ದಾರೆ. ಅಂಬರೀಶ್ ಕಟ್ಟಾ ಅಭಿಮಾನಿಯಾಗಿರುವ ನಂದೀಶ್, ಅಂಬಿ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದರು.

ನಟ ಅಂಬರೀಶ್ ಕಲಿಯುಗದ ಕರ್ಣ, ಅವರು ದಾನ ಮಾಡುವುದರಲ್ಲಿ ಮುಂದಾಗಿದ್ದರು. ಇಂದು ನಮ್ಮ ಗ್ರಾಮದಲ್ಲಿ ಅಂಬರೀಶ್ ಪುಣ್ಯಸ್ಮರಣೆ ಇಟ್ಟುಕೊಂಡಿದ್ದೆವು. ಅವರ ಅಭಿಮಾನಿಗಳು ಅವರಿಗಾಗಿ ಕೇಶ ಮುಂಡನ ಮಾಡಿಕೊಂಡಿದ್ದಾರೆ. ಗ್ರಾಮದ ಜನರಿಗೆ ಊಟ ಮಾಡಿ, ಬಡಿಸಿದ್ದೇವೆ. ನಾನು ಅವರ ಅಭಿಮಾನಿಯಾಗಿ ನನ್ನ ಪ್ರಾಣ ಅಂಬರೀಶ್ ರವರ ಬಳಿ ಲೀನವಾಗುತ್ತದೆ. ನಂತರ ಅವರ ಸ್ಮರಣಾರ್ಥ ನನ್ನ ದೇಹದ ಅಂಗಾಂಗಳನ್ನು ದಾನ ಮಾಡುತ್ತೇನೆ ಎಂದು ನಂದೀಶ್ ಹೇಳಿದ್ದಾರೆ.

ನವೆಂಬರ್ 24 ರಂದು ನಟ ಅಂಬರೀಶ್ ಅವರು ಅನಾರೋಗ್ಯದ ಕಾರಣ ವಿಧಿವಶರಾಗಿದ್ದು, ಕಂಠೀರವ ಸ್ಟೇಡಿಯಂನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ನಟ ಅಂಬರೀಶ್ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *