ಸನ್ಯಾಸಿಯಾಗೋದಕ್ಕೆ ಮನಸ್ಸು ಮಾಡಿದ್ದರು ರಾಕಿಂಗ್ ಸ್ಟಾರ್..!

ಬೆಂಗಳೂರು: ಸ್ಯಾಂಡಲ್‍ವುಡ್ ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಟ ಯಶ್ ಅವರು ಒಂದು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

ನಟ ಯಶ್, ತಾವು ಸಿನಿಮಾ ಸ್ಟಾರ್ ಆಗದಿದ್ದರೆ ಸನ್ಯಾಸಿಯಾಗುತ್ತಿದ್ದೆ ಎಂದು ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಪ್ರಮೋಶನ್‍ಗಾಗಿ ಯಶ್ ನಾಲ್ಕು ಭಾಷೆಯ ಮಾಧ್ಯಮಗಲ್ಲಿ ಸಂದರ್ಶನ ಕೊಡುತ್ತಿದ್ದಾರೆ. ಆದರೆ ಮಾಧ್ಯಮವೊಂದರಲ್ಲಿ ಜನರು ಪ್ರಶ್ನೆಗಳನ್ನು ಯಶ್ ಮುಂದೆ ಇಟ್ಟಿದ್ದರು.

ಒಂದು ಪ್ರಶ್ನೆಗೆ ಒಂದೇ ಸಾಲಿನ ಉತ್ತರ ಕೊಡುವುದು ಪದ್ಧತಿಯಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯಶ್ ಅವರಿಗೆ, ನೀವು `ನಟನಾಗದಿದ್ದರೆ ಇನ್ಯಾವ ವೃತ್ತಿ ಮಾಡುತ್ತಿದ್ರಿ’ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟ ಯಶ್ ‘ನಾನು ನಟನಾಗದಿದ್ದರೆ ಸ್ವಾಮೀಜಿಯಾಗುತ್ತಿದ್ದೆ’ ಎಂದು ಉತ್ತರ ಕೊಟ್ಟಿದ್ದಾರೆ. ನಟ ಯಶ್ ಉತ್ತರ ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದು, ಆ ಬಳಿಕ ನಕ್ಕಿದ್ದಾರೆ.

ಸದ್ಯಕ್ಕೆ ಯಶ್ ಯಾಕೆ ಆ ಉತ್ತರ ಹೇಳಿದ್ರು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ‘ಕೆಜಿಎಫ್’ ಸಿನಿಮಾ ಡಿ.21 ರಂದು ಬಿಡುಗಡೆಯಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *