ಡೆತ್‌ನೋಟ್ ಬರೆದಿಟ್ಟು KSRTC ಬಸ್ ಚಾಲಕ ಆತ್ಮಹತ್ಯೆಗೆ ಯತ್ನ

– 5 ತಿಂಗ್ಳ ಮಗು ಜೊತೆ ಪತ್ನಿಯೂ ಆತ್ಮಹತ್ಯೆಯ ಎಚ್ಚರಿಕೆ

ಹಾಸನ: ತನ್ನ ತಪ್ಪಿಲ್ಲದಿದ್ದರೂ 7 ವರ್ಷ ಹಳೆಯ ಪ್ರಕರಣಲ್ಲಿ ಮೇಲಧಿಕಾರಿಗಳು ಕಿರುಕುಳ ನೀಡುತ್ತಾರೆಂದು ಆರೋಪಿಸಿರುವ ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಎರಡು ಪುಟಗಳ ಡೆತ್‍ನೋಟ್ ಕೂಡ ಬರೆದಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸದೇ ಕಣ್ಣಾಮುಚ್ಚಾಲೆ ಆಡ್ತಿದ್ದಾರಂತೆ. ಇತ್ತ ತನ್ನ ಪತಿಗಾಗಿರುವ ಅನ್ಯಾಯ ಸರಿಪಡಿಸದೇ ಹೋದ್ರೆ, 5 ತಿಂಗಳ ಮಗುವಿನೊಂದಿಗೆ ವಿಷ ಕುಡಿದು ಸಾಯೋದಾಗಿ ಪತ್ನಿಯೂ ಎಚ್ಚರಿಕೆ ನೀಡಿದ್ದಾರೆ. 2010 ರಿಂದ ಕೆಎಸ್‍ಆರ್‍ಟಿಸಿ ರಾಮನಾಥಪುರ ವಿಭಾಗದಲ್ಲಿ ಬಸ್ ಚಾಲಕ ಕಮ್ ನಿರ್ವಾಹಕನಾಗಿ ಕೆಲಸ ಮಾಡಿದ್ದ ರಾಮು ಇಂದು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಏನಿದು ಪ್ರಕರಣ?:
ರಾಮು 2011ರಲ್ಲಿ ಎಂದಿನಂತೆ ಕರ್ತವ್ಯದಲ್ಲಿದ್ದಾಗ ಮಧು ಎಂಬಾತ ಟಿಕೆಟ್ ಪಡೆಯದೇ ಕಿರಿಕಿರಿ ಉಂಟು ಮಾಡಿದ್ದ. ಸಣ್ಣ ವಿಷಯಕ್ಕೆ ಮಾತಿಗೆ ಮಾತು ಬೆಳೆದು ರಾಮು ಮತ್ತು ಮಧು ಕೈ ಕೈ ಮಿಲಾಯಿಸಿದ್ದರು. 7 ವರ್ಷಗಳ ಹಿಂದಿನ ಪ್ರಕರಣ, ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ರೆ ರಾಮು ಮೇಲೆ ಕೈ ಮಾಡಿದ್ದ ಮಧು ಅಣ್ಣ ಕಮಲ್ ಕುಮಾರ್ ಅದೇ ಕೆಎಸ್‍ಆರ್‍ಟಿಸಿ ಹಾಸನ ವಿಭಾಗದಲ್ಲಿ ಡಿಟಿಓ ಆಗಿದ್ದು, ತನ್ನ ತಮ್ಮನ ಮೇಲಿನ ಕೇಸ್ ವಾಪಸ್ ಪಡೆದುಕೋ ಎಂದು ಕಿರುಕುಳ ನೀಡ್ತಿದ್ರಂತೆ. ಅಷ್ಟೇ ಅಲ್ಲ ಕೇಸ್ ವಾಪಸ್ ಪಡೆಯದೇ, ಇಲಾಖೆಯಲ್ಲಿ ಹೇಗೆ ಕೆಲಸ ಮಾಡ್ತಿಯೋ ನೋಡ್ತೀನಿ ಅಂತ ಬೆದರಿಕೆ ಸಹ ಹಾಕ್ತಿದ್ದಾರೆ ಅಂತ ಆರೋಪಿಸಲಾಗಿದೆ.

ಇದರಿಂದ ಬೇಸತ್ತ ರಾಮು, ತನಗಾಗುತ್ತಿರುವ ತೊಂದರೆ ಬಗ್ಗೆ 2 ಪುಟಗಳ ಡೆತ್‍ನೋಟ್ ಬರೆದಿಟ್ಟು 4 ದಿನಗಳ ಹಿಂದೆಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರಾಮು ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಇದುವರೆಗೂ ಎಫ್‍ಐಆರ್ ಕೂಡ ದಾಖಲು ಮಾಡಿಲ್ಲ ಅಂತ ಬಿಎಸ್‍ಪಿ ಜಿಲ್ಲಾಧ್ಯಕ್ಷ ಹರೀಶ್ ತಿಳಿಸಿದ್ದಾರೆ.

ಇದರಿಂದ ಆತಂಕಗೊಂಡಿರೋ ರಾಮು ಪತ್ನಿ, ನನ್ನ ಪತಿಗೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ, ಪೊಲೀಸರು ನ್ಯಾಯ ಕೊಡಿಸದಿದ್ರೆ, ನನ್ನ 5 ತಿಂಗಳ ಮಗುವಿನೊಂದಿಗೆ ತಾನೂ ಹಾಸನ ಎಸ್ಪಿ ಕಚೇರಿ ಎದುರು ವಿಷ ಕುಡಿದು ಸಾಯುತ್ತೇನೆ ಅಂತ ಅಳಲು ತೋಡಿಕೊಂಡಿದ್ದಾರೆ.

ಕಾನೂನು ಇರೋದೇ ತಪ್ಪು ಮಾಡಿದವರನ್ನು ಶಿಕ್ಷಿಸೋಕೆ. ಇಲ್ಲಿ ರಾಮು ತಪ್ಪು ಮಾಡಿದ್ರೆ, ಆತನ ಮೇಲೆ ಕ್ರಮ ಜರುಗಿಸಲಿ. ಅದು ಬಿಟ್ಟು ಹಳೇ ಕೇಸ್ ಕೆದಕಿ ಬೆದರಿಕೆಯೊಡ್ಡೋದು ಎಷ್ಟು ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *