ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಮಿಜೋರಾಂ ಸಿಎಂಗೆ ಸೋಲು!

ಐಜಾಲ್: ಮಿಜೋರಾಂ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಲಾಲ್ ಥನ್ಹಾವ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಪರಾಭವಗೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಿಜೋರಾಂನ ಸಿಎಂ ಲಾಲ್ ಥವ್ಹಾವ್ಲಾ ಅವರು ತಮ್ಮ ಕಾಯಂ ಕ್ಷೇತ್ರವಾಗಿದ್ದ ದಕ್ಷಿಣ ಚಾಂಪೈ ಕಣಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೆ ಸೇರ್ಫಿಪ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ಲಾಲ್ ಥವ್ಹಾವ್ಲಾ ವಿಫಲರಾಗಿದ್ದಾರೆ. ದಕ್ಷಿಣ ಚಾಂಪೈ ಕ್ಷೇತ್ರದಲ್ಲಿ ಲಾಲ್ ಥವ್ಹಾವ್ಲಾ ಅವರು ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಟಿಟಿ ಲಾಲ್ನುಂಟ್ಲುಂಗಾ ವಿರುದ್ಧ 1,049 ಮತಗಳ ಅಂತರದಲ್ಲಿ ಸೋತಿದ್ದಾರೆ.

ಕಾಂಗ್ರೆಸ್ ಕಳೆದ ಎರಡು ಅವಧಿಗಳಿಂದ ಮಿಜೋರಾಂನಲ್ಲಿ ಅಧಿಕಾರದ ಚುಕ್ಕಾನೆ ಹಿಡಿದಿತ್ತು. ಆದರೆ ಈಗ ಪರಾಭವಗೊಂಡಿರುವ ಪರಿಣಾಮ ಈಶಾನ್ಯ ರಾಜ್ಯವು ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರಲಿದೆ.

ಲಾಲ್ ಥನ್ಹಾವ್ಲಾ ಅವರು 1984ರಿಂದ ರಾಜಕೀಯಕ್ಕೆ ಕಾಲಿಟ್ಟಿದ್ದು, ಒಟ್ಟು 5 ಬಾರಿ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *