ಹಣ ಉಳಿಸಲು ಹೋಗಿ ಗ್ಯಾಂಗ್‍ರೇಪ್‍ಗೆ ಯುವತಿ ಬಲಿ!

ಚೆನ್ನೈ: 23 ವರ್ಷದ ಬ್ಯಾಂಕ್ ಉದ್ಯೋಗಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ಕುಂಬಕೋಣಂ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ಮೂಲತಃ ದೆಹಲಿಯವರಾಗಿದ್ದು, ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಕೋರ್ಟ್ ಡಿಸೆಂಬರ್ 20ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಸಂತ್ರಸ್ತೆ ನವೆಂಬರ್ 2ರಂದು ಕುಂಬಕೋಣಂಗೆ ಕೆಲಸ ನಿಮಿತ್ತ ಬಂದಿದ್ದರು. ಬಳಿಕ ಕೆಲಸ ಮುಗಿಸಿ ತಡವಾಗಿ ಹೊರಟಿದ್ದಾರೆ. ಆದ್ದರಿಂದ ಸಂತ್ರಸ್ತೆ ಆಟೋಗೆ ಹತ್ತಿ ಹೋಗಿದ್ದರು. ಈ ವೇಳೆ ಆಟೋ ಚಾಲಕ ಅಧಿಕ ಹಣವನ್ನು ಕೊಡುವಂತೆ ಕೇಳಿದ್ದಾನೆ.

ಆಗ ಸಂತ್ರಸ್ತೆ ಜಾಸ್ತಿ ಹಣ ಯಾಕೆ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರು ನಡುವೆ ವಾದ ನಡೆದಿದೆ. ಇದರಿಂದ ಕೋಪಗೊಂಡು ಆಟೋ ಚಾಲಕ ಸಂತ್ರಸ್ತೆಯನ್ನು ಕತ್ತಲಿನಲ್ಲಿ ದಾರಿ ಮಧ್ಯೆಯೇ ಬಿಟ್ಟು ಹೋಗಿದ್ದಾನೆ. ಆಗ ನಾಲ್ವರು ಬಂದು ಸಂತ್ರಸ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಆಘಾತದಿಂದ ಭಯಭೀತರಾಗಿದ್ದು, ಈ ಘಟನೆಯ ಬಗ್ಗೆ ಪೋಲೀಸ್ ದೂರು ನೀಡಲಿಲ್ಲ. ನಂತರ ಈ ಕುರಿತು ಸಹೋದ್ಯೋಗಿಗಳಿಗೆ ತಿಳಿದಿದ್ದು, ಅವರು ನಾಲ್ವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿದ್ದು, ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *