– ದೀಪ್ವೀರ್ ಆರತಕ್ಷತೆ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಶೇರ್
ಮುಂಬೈ: ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ಮುಂಬೈ ಆರತಕ್ಷತೆಯಲ್ಲಿ ಬಾಲಿವುಡ್ ಶೆಹನ್ ಶಾ ಅಮಿತಾಬ್ ಬಚ್ಚನ್ ಬಾಲಿವುಡ್ ಹಿಟ್ ಜುಮ್ಮಾ ಚುಮ್ಮಾ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಡಿಸೆಂಬರ್ 1 ರಂದು ಮುಂಬೈನಲ್ಲಿ ಸಿನಿಮಾ ರಂಗದ ಸ್ನೇಹಿತರಿಗಾಗಿಯೇ ದೀಪ್ವೀರ್ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್, ಮಗಳು ಶ್ವೇತಾ ಬಚ್ಚನ್ ಹಾಗು ಸೊಸೆ ಐಶ್ವರ್ಯಾ ರೈ ಬಚ್ಚನ್ ಜೊತೆಗೂಡಿ ಆಗಮಿಸಿದ್ದರು. ಈ ವೇಳೆ ಡಿ.ಜೆ ಪಾರ್ಟಿಯಲ್ಲಿ ಚುಮ್ಮ ಚುಮ್ಮ ಹಾಡಿಗೆ ಬಿಗ್ ಹೆಜ್ಜೆ ಹಾಕಿದ್ದಾರೆ. ದೀಪಿಕಾ ಹಾಗೂ ರಣ್ವೀರ್ ಜೊತೆ ಸೇರಿ ಕಾರ್ಯಕ್ರಮವನ್ನು ಫುಲ್ ಎಂಜಾಯ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
https://www.instagram.com/p/Bq9MYdYhZr5/?utm_source=ig_embed
ಅಷ್ಟೆ ಅಲ್ಲದೆ ದೀಪ್ವೀರ್ ಆರತಕ್ಷತೆಯಲ್ಲಿ ತೆಗೆದ ಫೋಟೋಗಳನ್ನು ಅಮಿತಾಬ್ ಬಚ್ಚನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಖುಷಿ ಪಟ್ಟಿದ್ದಾರೆ.
ದೀಪಿಕಾ ಮತ್ತು ರಣ್ವೀರ್ ನ.14 ಹಾಗೂ 15ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಬಳಿಕ ಮೊದಲು ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಅದೇ ತಿಂಗಳು 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ನಲ್ಲಿ ಆರತಕ್ಷತೆಯನ್ನು ಮಾಡಿಕೊಂಡಿದ್ದರು. ಸಿನಿಮಾ ಸ್ನೇಹಿತರಿಗಾಗಿಯೇ ಮೂರನೇ ಬಾರಿಯೂ ಆರತಕ್ಷತೆಯನ್ನು ಮುಂಬೈನಲ್ಲಿಯೇ ಆಯೋಜಿಸಿದ್ದರು.
https://www.instagram.com/p/Bq3F-uhhlsm/?utm_source=ig_embed&utm_campaign=embed_video_watch_again
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply