ಕೆಜಿಎಫ್ ಕಡೆಯಿಂದ ಇಂದು ಹೊರಬೀಳಲಿದೆ ಮತ್ತೊಂದು ಅಚ್ಚರಿ!

ನಿನ್ನೆಯಷ್ಟೇ ಕೆಜಿಎಫ್ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಇದರ ಮೂಲಕವೇ ಈ ಚಿತ್ರದ ಸುತ್ತ ಮತ್ತೊಂದು ಸುತ್ತಿನ ಆಕರ್ಷಣೆಯೂ ಶುರುವಾಗಿದೆ. ಇದೇ ಹೊತ್ತಿನಲ್ಲಿ ಇವತ್ತು ಕೆಜಿಎಫ್ ಕಡೆಯಿಂದ ಪ್ರೇಕ್ಷಕರ ಪಾಲಿಗೆ ಮತ್ತೊಂದು ಅಚ್ಚರಿಯೂ ಎದುರಾಗಲಿದೆ. ಇಂಥಾದ್ದೊಂದು ಶುಭ ಸೂಚನೆ ಹೊರ ಬಿದ್ದಿರೋದು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಕಡೆಯಿಂದ!

ಫರ್ಹಾನ್ ಅಖ್ತರ್ ಟ್ವಿಟ್ಟರ್ ಮೂಲಕ ಸಾರಿರುವ ಸಂದೇಶವನ್ನು ಆಧರಿಸಿ ಹೇಳೋದಾದರೆ ಇಂದು ಕೆಜಿಎಫ್‍ನ ಹಿಂದಿ ಆವೃತ್ತಿಯ ಎರಡನೇ ಟ್ರೈಲರ್ ಲಾಂಚ್ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರವೇ ಥಂಡಾ ಹೊಡೆದಿದೆ. ಹೀಗಿರುವಾಗ ಈಗ ಬಿಡುಗಡೆಯಾಗಲಿರೋ ಈ ಟ್ರೈಲರ್ ಎಂಥಾ ಹವಾ ಸೃಷ್ಟಿಸಬಹುದೆಂಬ ಬಗ್ಗೆ ಬಾಲಿವುಡ್ಡಲ್ಲಿಯೂ ಕುತೂಹಲದ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

ಹಿಂದಿಯಲ್ಲಿ ಕೆಜಿಎಫ್ ಚಿತ್ರದ ವಿತರಣೆಯ ಹಕ್ಕುಗಳನ್ನು ಫರಾನ್ ಅಖ್ತರ್ ಪಡೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರ ಕನ್ನಡ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *