ಆಫೀಸ್‍ಗೆ ನುಗ್ಗಿದ ಹಂತಕರಿಂದ ರೌಡಿಶೀಟರ್ ಬರ್ಬರ ಹತ್ಯೆ!

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಕೇಬಲ್ ವಿಜಿ ಅಲಿಯಸ್ ಲಕ್ಕಸಂದ್ರ ವಿಜಯ್ ಕುಮಾರ್ ನನ್ನು ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ನಗರದ ಲಕ್ಕಸಂದ್ರದ 16 ನೇ ಕ್ರಾಸ್ ನಲ್ಲಿರುವ ಕೇಬಲ್ ರವಿ ತನ್ನ ಆಫೀಸ್ ನಲ್ಲಿ ಇದ್ದನು. ಈ ಬಗ್ಗೆ ಮಾಹಿತಿ ಪಡೆದಿದ್ದ ಹಂತಕರು ಏಕಾಏಕಿ ಆಫೀಸ್ ಗೆ ನುಗ್ಗಿ ಮಚ್ಚು ಲಾಂಗ್ ಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಕೊಲೆ ಮಾಡಿದ ಬಳಿಕ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಂಬಾ ದಿನಗಳಿಂದ ವಿಜಿ ಹತ್ಯೆಗೆ ನಾಗಾ ಮತ್ತು ಆತನ ತಂಡ ಕಾದು ಕುಳಿತ್ತಿದ್ದರು ಎನ್ನಲಾಗಿದೆ. ವಿಜಿಯನ್ನು ನಾಗಾನ ಗ್ಯಾಂಗ್  ಸದಸ್ಯರು ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ವಿಜಿ ಸೈಲೆಂಟ್ ಸುನೀಲನ ಸಹಚರನಾಗಿದ್ದು, ಹಲವು ವರ್ಷಗಳಿಂದ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಸದ್ಯಕ್ಕೆ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *