ಡಿಕೆಶಿ ಟ್ರಬಲ್ ಶೂಟರ್ ಅಲ್ಲ, ಆತ ಟ್ರಬಲ್ ಸೇವರ್: ದ್ವಾರಕನಾಥ್ ಗುರೂಜಿ

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ. ಆತನೋರ್ವ ಟ್ರಬಲ್ ಸೇವರ್ (ರಕ್ಷಕ) ಎಂದು ರಾಜಗುರು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ.

ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವ ಡಿಕೆ ಶಿವಕುಮಾರ್, ಇನ್ನು ತುಂಬಾ ಮೆಚ್ಯೂರೆಡ್ ಆಗಿ ಮಾತುಕತೆ ನಡೆಸುವುದನ್ನು ಸಚಿವರು ಅಳವಡಿಸಿಕೊಳ್ಳಬೇಕು. ಸ್ವಲ್ಪ ಮಾತನಾಡುವ ಶೈಲಿ, ಬಾಡಿ ಸ್ಟೈಲ್ ಬದಲಾಯಿಸಿಕೊಂಡರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಅರ್ಹತೆಯುಳ್ಳ ವ್ಯಕ್ತಿ. ಯಾವ ಸಮಯದಲ್ಲಿ ಏನು ಬೇಕಾದರು ಕೊಡಿ, ಆ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಶಿವಕುಮಾರ್ ಹೊಂದಿದ್ದಾರೆ.

ಬಿಜೆಪಿ ಭದ್ರಕೋಟೆ ಅಂತಾ ಕರೆಸಿಕೊಳ್ಳುತ್ತಿದ್ದ ಬಳ್ಳಾರಿಯನ್ನು ಗೆದ್ದುಕೊಂಡು ಬಂದಿದ್ದಾರೆ. ರಾಮನಗರದಲ್ಲಿ ತಮ್ಮ ಕೈಚಳಕವನ್ನು ತೋರಿಸಿಯೇ ಬಿಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಟ್ರಬಲ್ ಸೇವರ್ ಎಂದು ಹೇಳುವ ಮೂಲಕ ಸಚಿವರನ್ನು ಗುರೂಜಿ ಹಾಡಿ ಹೊಗಳಿದರು.

ಡಿಕೆ ಶಿವಕುಮಾರ್ ಅವರನ್ನು ಚಿಕ್ಕ ವಯಸ್ಸಿನಿಂದಲು ತಿದ್ದಿ ತಂದವನು ನಾನೇ. ಬೇಕಾದ್ರೆ ಯಾವ ದೇವರು ಮೇಲಾದ್ರು ಪ್ರಮಾಣ ಮಾಡ್ತೀನಿ. ಇನ್ನು ದೃಢವಾದ ಭಕ್ತಿ ಬಂದು ದತ್ತಾತ್ರೇಯನಿಗೆ ಶರಣು ಹೋದರೆ ಪದವಿ ಸಿಗುತ್ತದೆ. ಒಂದು ದತ್ತಾತ್ರೇಯನಿಂದ ದೂರ ಹೋದ್ರೆ ಪದವಿ ಸಿಗಲ್ಲ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಅವರು ದೊಡ್ಡ ನಾಯಕರಾಗಿದ್ದು, ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದನ್ನು ಬಿಡಬೇಕು. ಎಷ್ಟು ಶಾಂತ ಚಿತ್ತರಾಗಿ ಕೆಲಸ ಮಾಡುತ್ತಾರೋ ಅಷ್ಟೇ ಒಳ್ಳೆಯದಾಗುತ್ತದೆ. ದೊಡ್ಡ ನಾಯಕರು ಯಾರು ಹೆಚ್ಚಿನ ಮಾತನಾಡಿದವರಲ್ಲ. ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಪಕ್ಷದಿಂದ ಒಬ್ಬರೇ ಮಾತಾಡಬೇಕು. ಎಲ್ಲರು ತಮ್ಮ ಹೇಳಿಕೆಯನ್ನು ನೀಡುತ್ತಾ ಹೋದ್ರೆ ಗೊಂದಲ ಉಂಟಾಗುತ್ತದೆ. ಸಿಎಂ ಅವರ ಅಣ್ಣ, ತಮ್ಮ, ಮಕ್ಕಳು ಮಾತನಾಡೋದನ್ನು ನಿಲ್ಲಿಸಬೇಕು. ಇತ್ತ ಕಾಂಗ್ರೆಸ್ ನಿಂದಲೂ ಒಬ್ಬರೇ ಮಾತನಾಡಿದಾಗ ಮಾತ್ರ ಮೈತ್ರಿಯಲ್ಲಿ ಐಕ್ಯತೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಬೆಂಬಲ ನೀಡಿದ ಮೇಲೆ ಕಿರುಕುಳ ಕೊಡಬಾರದು. ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಶಾಂತಿಯಿಂದ ಸರ್ಕಾರವನ್ನು ಮಾರ್ಚ್ 27ರವರೆಗೆ ತೆಗೆದುಕೊಂಡ ಹೋದ್ರೆ ಮಾತ್ರ ಮೈತ್ರಿಯ ಕಾರ್ಯಸಾಧನೆ ಆಗಲಿದೆ. ಕುಮಾರಸ್ವಾಮಿ ಅವರು ರಾಜ್ಯದ ನಾಯಕರಾಗಿದ್ದು, ಅತ್ಯಂತ ಶಾಂತಿಯಿಂದ ಕೆಲಸ ನಿರ್ವಹಿಸಬೇಕಿದೆ. ಆರೋಗ್ಯ ಸುಧಾರಣೆಗಾಗಿ ಸನ್ನತಿಯ ಚಂದ್ರಲಾಪುರ ದೇವಿಯ ದರ್ಶನ ಮಾಡಿಬರಬೇಕು. ಚಂದ್ರಲಾಪುರ ದೇವಿ ಮಾತ್ರ ಆರೋಗ್ಯ ಭಾಗ್ಯವನ್ನು ನೀಡಲಿದೆ ಎಂದ ಪಬ್ಲಿಕ್ ಟಿವಿ ಮೂಲಕ ಸಿಎಂಗೆ ಸಂದೇಶ ರವಾನಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *