ನಿಮ್ಮ ಕೈಲಿ ಆಗಿಲ್ಲಂದ್ರೆ ಹಂಪಿ ಉತ್ಸವಕ್ಕೆ ಆರ್ಥಿಕ ನೆರವು ನೀಡ್ತೀನಿ- ರೆಡ್ಡಿ ಸವಾಲಿಗೆ ಡಿಕೆಶಿ ಟಾಂಗ್

ಬೆಂಗಳೂರು: ಬರದ ಕಾರಣದಿಂದ ಬಳ್ಳಾರಿಯಲ್ಲಿ ಹಂಪಿ ಉತ್ಸವ ಕೈಬಿಟ್ಟ ದೋಸ್ತಿ ಸರ್ಕಾರಕ್ಕೆ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ನೇರ ಸವಾಲು ಎಸೆದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಜನರಿಂದ ಯಾಕೆ ದುಡ್ಡು ವಸೂಲಿ ಮಾಡ್ತೀರಿ..? ಬಿಜೆಪಿಯವರು ಶಾಸಕರ ನಿಧಿಯಿಂದ ದುಡ್ಡು ತೆಗೆದು ಕೊಡಲಿ ಅಂತ ಹೇಳುವ ಮೂಲಕ ರೆಡ್ಡಿ ಫೇಸ್ ಬುಕ್ ಪೋಸ್ಟ್ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವ ನಡೆಯಲ್ಲ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಆ ನಂತರ ಬಿಜೆಪಿ ನಾಯಕರು ಸಮ್ಮಿಶ್ರ ಸಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಟಿಪ್ಪು ಜಯಂತಿಯಂತಹ ಬೇರೆ ಬೇರೆ ಜಯಂತಿಗಳನ್ನು ಮಾಡಲು ಸರ್ಕಾರದ ಬಳಿ ಹಣ ಇತ್ತು. ಆದ್ರೆ ಹಂಪಿ ಉತ್ಸವ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಭಿಕ್ಷೆ ಎತ್ತಿಯಾದ್ರೂ ಉತ್ಸವ ಮಾಡೇ ಮಾಡ್ತೀವಿ ಅಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಂಪಿ ಉತ್ಸವ ಕೈಬಿಟ್ಟ ದೋಸ್ತಿ ಸರ್ಕಾರಕ್ಕೆ ಜನಾರ್ದನ ರೆಡ್ಡಿ ನೇರ ಸವಾಲು

ಸೋಮಶೇಖರ್ ರೆಡ್ಡಿಯವರು ಈ ಹಿಂದೆ ಜೋಳಿಗೆ ಮೂಲಕ ಹಣ ಸಂಗ್ರಹ ಮಾಡಿ ಹಂಪಿ ಉತ್ಸವ ಮಾಡಿದ್ರು. ಹೀಗಾಗಿ ಬಿಜೆಪಿಯವರು ಜೋಳಿಗೆಯೆತ್ತಿಕೊಂಡು ಹೋಗಿ ಹಣ ವಸೂಲಿ ಮಾಡೋದು ಬೇಡ. ಈ ಮೂಲಕ ಜನರಿಗೆ ಹಿಂಸೆ ಕೊಡೋದು ಬೇಡ. ಬದಲಾಗಿ ಅವರು ಶಾಸಕರ ನಿಧಿಗೆ ಕೊಡಲಿ ಅಥವಾ ಹೇಗೆ ಮಾಡಬೇಕು ಅಂತ ಸಲಹೆ ನೀಡಲಿ. ಒಟ್ಟಿನಲ್ಲಿ ವಿಜಯನಗರ ಸಂಸ್ಕøತಿ ಹಾಗೂ ಇತಿಹಾಸಕ್ಕೆ ಯಾವುದೇ ರೀತಿ ಧಕ್ಕೆ ಬರದ ರೀತಿಯಲ್ಲಿ ನಾವು ಹಂಪಿ ಉತ್ಸವ ಮಾಡಬೇಕು ಅಂತ ಇದ್ದೀವಿ. ಹೀಗಾಗಿ ಸದ್ಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾ ಇದ್ದೀವಿ.

ಒಂದು ದಿನ ಉತ್ಸವ ಮಾಡಲು ಸಾಧ್ಯನಾ ಅಂತ ನೋಡಲು ಅಧಿಕಾರಿಗಳಿಗೆ ಹೇಳಿದ್ದೀವಿ. ಬರಗಾಲ ಇದ್ದಿದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಉತ್ಸವ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಅದರ ಗೌರವಕ್ಕೆ ಧಕ್ಕೆಯಾಗುತ್ತದೆ ಅಂತ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *