ತಡವಾಗಿ ಅಂಬಿ ಸಾವಿನ ಸುದ್ದಿ ತಿಳಿಯಿತು- ಗೊಂದಲ ಟ್ವೀಟ್‍ಗೆ ಹರ್ಷಿಕಾ ಸ್ಪಷ್ಟನೆ

ಬೆಂಗಳೂರು: ಹಿರಿಯ ನಟ ಅಂಬರೀಶ್ ಸಾವಿನ ದಿನ ಸಂತಾಪ ಸೂಚಿಸಿ ನಟಿ ಹರ್ಷಿಕಾ ಪೂಣಚ್ಚ ಟ್ವೀಟ್ ಮಾಡಿದ್ದರು. ಆದರೆ ಶುಕ್ರವಾರ ಅಂಬಿ ಅಂಕಲ್ ಸಾವಿನ ಸುದ್ದಿ ಇಂದು ನನಗೆ ತಿಳಿಯಿತು ಎಂದು ಮತ್ತೆ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ್ದರು. ಈಗ ಅವರೇ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂಬಿ ಸಾವಿನ ಸುದ್ದಿಯನ್ನ ಇಂದು ತಿಳಿದುಕೊಂಡ ಹರ್ಷಿಕಾ ಪೂಣಚ್ಚ

ಈ ಬಗ್ಗೆ ನಟಿ ಹರ್ಷಿಕಾ ಇನ್ ಸ್ಟಾಗ್ರಾಂ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. “ನಾನು ಅಂಬರೀಶ್ ಅಂಕಲ್ ಮರಣದಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ. ನಾನು ಮಾಡಿದ ಟ್ವೀಟ್ ನಿಂದಾಗಿ ಈಗ ನಿಮ್ಮಲ್ಲರಿಗೂ ಗೊಂದಲ ಉಂಟಾಗಿದೆ. ಆದ್ದರಿಂದ ನಾನೇ ಅದಕ್ಕೆ ಉತ್ತರ ಕೊಡುತ್ತೇನೆ. ನನ್ನ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಪೇಜ್‍ಗಳನ್ನು ಒಂದು ಕಾರ್ಪೋರೇಷನ್ ಕಂಪನಿ ನಿಭಾಯಿಸುತ್ತಿದೆ. ನಾನು ಶೂಟಿಂಗ್ ಗಾಗಿ ಮೊಬೈಲ್ ನೆಟ್‍ವರ್ಕ್ ಸಿಗದೇ ಇರುವ ಸ್ಥಳಕ್ಕೆ ಹೋಗಿದ್ದೆ. ಆಗ ಕಂಪನಿ ನನ್ನ ಪರವಾಗಿ ಅಂಬರೀಶ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ. ಇಂದು ನನಗೆ ನೆಟ್‍ವರ್ಕ್ ಸಿಕ್ಕಿತ್ತು. ಆದರೆ ನಾನು ಅಂಬರೀಶ್ ಅಂಕಲ್ ನ ಸಾವಿನ ಸುದ್ದಿ ಕೇಳಿದ ಕೂಡಲೇ ನನಗೆ ಶಾಕ್ ಆಯ್ತು. ಕೊನೆಯ ಕ್ಷಣದಲ್ಲಿ ನಾನು ಅಂಬರೀಶ್ ಅಂಕಲ್ ಮುಖವನ್ನು ನೋಡಲು ಸಾಧ್ಯವಾಗಿಲ್ಲ. ಇದರಿಂದ ನನಗೆ ತುಂಬಾ ನೋವಾಗುತ್ತಿದೆ. ಸದ್ಯಕ್ಕೆ ನಾವೆಲ್ಲರೂ ಅಂಬರೀಶ್ ಕುಟುಂಬವರಿಗಾಗಿ ಪಾರ್ಥನೆ ಮಾಡಿಕೊಳ್ಳೋಣ. ಮಿಸ್ ಯೂ ಅಂಕಲ್” ಎಂದು ಬರೆದುಕೊಂಡಿದ್ದಾರೆ.

https://twitter.com/actressharshika/status/1068395378222006272

ಹರ್ಷಿಕಾ ಪೂಣಚ್ ಟ್ವೀಟ್ ಏನು?
ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಅಂಬರೀಶ್ ಅಂಕಲ್ ಸಾವಿನ ಸುದ್ದಿ ನನಗೆ ಈಗ ತಿಳಿಯಿತು ಎಂದು ಸಂತಾಪ ಸೂಚಿಸಿದ್ದರು. ಈ ಬಗ್ಗೆ ಹರ್ಷಿಕಾ ಪೂಣಚ್ಚ, “ಇಂದು ನನ್ನ ಅತ್ಯಂತ ದುಃಖದ ದಿನ. ನಾನು ಒಂದು ಶೂಟ್ ಗಾಗಿ ದಿನಾಂಕ 23 ರ ರಿಂದ ನೆಟ್‍ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು. ನಾನು ಎಂಥ ದುರದೃಷ್ಟವಂತೆ, ಅವರನ್ನು ಕೊನೆಯದಾಗಿ ನೋಡಲು ಅವಕಾಶವೂ ನನಗೆ ಸಿಕ್ಕಿಲ್ಲ. ಮಿಸ್ ಯೂ ಅಂಬರೀಶ್ ಅಂಕಲ್” ಎಂದು ಬರೆದು ಅಳುತ್ತಿರುವ ಎಮೋಜಿಯನ್ನು ಹಾಕಿ ಉತ್ತರಾಖಂಡದ ಪುರೋಲಾದಿಂದ ಟ್ವೀಟ್ ಮಾಡಿದ್ದರು.

ಈ ಹಿಂದೆ ಅಂದರೆ ನವೆಂಬರ್ 24 ರಂದು ಹರ್ಷಿಕಾ ಅಂಬಿ ಸಾವಿನ ಬಗ್ಗೆ ತಿಳಿದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಇಂದು ಮತ್ತೆ ಅಂಬರೀಶ್ ಸಾವಿನ ಸುದ್ದಿ ಗೊತ್ತೆ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಇದರಿಂದ ನೆಟ್ಟಿಗರು ಹರ್ಷಿಕಾ ಅವರಿಗೆ ಈ ಹಿಂದಿನ ಟ್ವೀಟ್ ಕಾಪಿಯನ್ನು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಆದ್ದರಿಂದ ಈಗ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ.

https://www.instagram.com/p/Bqzmn0onPrr/

https://www.youtube.com/watch?v=nPMdLmM38XE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *