ಮೇಕೆದಾಟು ಯೋಜನೆಗೆ ಕ್ಯಾತೆ- ಕೇಂದ್ರದ ಒಪ್ಪಿಗೆ ಪ್ರಶ್ನಿಸಿ ತಕರಾರು ತೆಗೆದ ತಮಿಳುನಾಡು

ಬೆಂಗಳೂರು: ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ತಮಿಳುನಾಡು ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಆರಂಭಿಕ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿತ್ತು. ಅಲ್ಲದೇ ಖುದ್ದು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಡೆ ಕೋರುವಂತೆ ಮನವಿ ನೀಡಿದ್ದರು.

ಈಗ ಇದಕ್ಕೂ ಒಂದು ಹೆಜ್ಜೆ ಮುಂದೆ ಹೊರಟಿದ್ದು, ಸಿಎಂ ಪಳನಿಸ್ವಾಮಿ ಸೂಚನೆ ಮೇರೆಗೆ ಶುಕ್ರವಾರ ತಮಿಳುನಾಡು ಕಾನೂನು ತಂಡ ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಿದೆ. ಈ ಮೂಲಕ ಮೇಕೆದಾಟು ಯೋಜನೆಗೆ ಕಾನೂನು ಹೋರಾಟವನ್ನು ತಮಿಳುನಾಡು ಸರ್ಕಾರ ತೆಗೆದುಕೊಂಡಿದೆ. ಇದನ್ನೂ ಓದಿ: ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

ಮೇಕೆದಾಟು ಸಂಬಂಧ ಹೊಸ ಅರ್ಜಿ ಸಲ್ಲಿಸಲಿರುವ ತಮಿಳುನಾಡು, ಯೋಜನೆಯಿಂದಾಗಿ ತಮಿಳುನಾಡಿಗೆ ಅನ್ಯಾಯ ಆಗಲಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣದಿಂದ ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಧಕ್ಕೆ ಆಗುತ್ತದೆ. ಅಲ್ಲದೇ ತಮಿಳುನಾಡಿಗೆ ಹರಿಯಬೇಕಾಗಿರುವ 177 ಟಿಎಂಸಿ ನೀರು ಪೂರ್ಣ ಪ್ರಮಾಣದ ಬರುವುದಿಲ್ಲ. ಈ ಯೋಜನೆಯು ನದಿಯ ನೈಸರ್ಗಿಕ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಪರಿಸರಕ್ಕೂ ಧಕ್ಕೆ ಆಗುತ್ತದೆಂದು ಪ್ರಸ್ತಾಪಿಸುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಅಸ್ತು- ತಡೆಕೋರುವಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *