ಎರಡು ದೇಶಗಳ ಸ್ನೇಹ ವೃದ್ಧಿಸಲು ಸಿದ್ದು ಭಾರತ ಪ್ರಧಾನಿ ಆಗಬೇಕಿಲ್ಲ – ಗೆಳೆಯನನ್ನು ಹಾಡಿಹೊಗಳಿದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿದ್ದುರನ್ನು ಏಕೆ ಟೀಕೆ ಮಾಡುತ್ತಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಆದರೆ ಎರಡು ದೇಶಗಳ ಸ್ನೇಹವನ್ನು ವೃದ್ಧಿಸಲು ಸಿದ್ದು ಭಾರತದ ಪ್ರಧಾನಿ ಆಗಬೇಕೆಂದು ನನಗೆ ಆನ್ನಿಸುತ್ತಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸಿಖ್ಖರ ಧಾರ್ಮಿಕ ಕೇಂದ್ರವಾಗಿರುವ ದರ್ಬಾರ್ ಗೆ ಭಾರತದಿಂದ ಸಂಪರ್ಕ ಕಲ್ಪಿಸುವ ಕರ್ತಾರಪುರ ಮಾರ್ಗದ ಕಾರಿಡಾರ್ ಕಾಮಗಾರಿಗೆ ಇಮ್ರಾನ್ ಖಾನ್ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಮಾತನಾಡಿದ ಇಮ್ರಾನ್ ಖಾನ್, ಎರಡು ದೇಶಗಳ ನಡುವೆ ಉತ್ತಮ ನಾಗರಿಕ ಸಂಬಂಧ ವೃದ್ಧಿಯಾಗಬೇಕಿದೆ. ನಾನು ಭಾರತಕ್ಕೆ ಭೇಟಿ ನೀಡಿದ ವೇಳೆ ಪಾಕಿಸ್ತಾನದ ಸೈನ್ಯಕ್ಕೆ ಶಾಂತಿ ಅಗತ್ಯವಿಲ್ಲ ಎಂಬ ಮಾತು ಹೇಳಿದ್ದರು. ಆದರೆ ಇಂದು ನಾನು ಪಾಕಿಸ್ತಾನದ ಪ್ರಧಾನಿಯಾಗಿ, ಪಕ್ಷದ ನಾಯಕನಾಗಿ ಹಾಗೂ ನಮ್ಮ ದೇಶದ ಸೈನ್ಯದ ಪರವಾಗಿ ಹೇಳುತ್ತಿದ್ದು, ಎರಡು ದೇಶಗಳೊಂದಿಗೆ ಉತ್ತಮ ನಾಗರಿಕ ಸಂಬಂಧಗಳು ಬೆಳೆಯಬೇಕು ಎಂದು ತಿಳಿಸಿದ್ರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ, ಶಾಸಕ ನವಜೋತ್ ಸಿಂಗ್ ಸಿದ್ದುರನ್ನು ಹಾಡಿಹೊಗಳಿದ ಇಮ್ರಾನ್ ಖಾನ್, ನನ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದುರನ್ನ ಏಕೆ? ಭಾರತದಲ್ಲಿ ಟೀಕೆ ಮಾಡಿದರು ಎಂದು ನನಗೆ ಗೊತ್ತಿಲ್ಲ. ಸಿದ್ದು ಶಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ. ಒಂದೊಮ್ಮೆ ಸಿದ್ದು ಪಾಕ್ ನೆಲದಲ್ಲಿ ಚುನಾವಣೆ ಎದುರಿಸಿದರು ಗೆದ್ದು ಬರುತ್ತಾರೆ. ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಿದ್ದು ಭಾರತದ ಪ್ರಧಾನಿ ಆಗಬೇಕು ಎಂದು ನನಗೆ ಆನ್ನಿಸುತ್ತಿಲ್ಲ ಎಂದರು.

ಭಾರತೀಯರಿಗೆ ಗುರುದ್ವಾರದ ಮಾರ್ಗ ತೆರೆದ ಕಾರಣ ವಿಸಾ ಇಲ್ಲದೇ ತೆರಳಬಹುದಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಸಿದ್ದು ಮಂಗಳವಾರವೇ ಪಂಜಾಬ್‍ಗೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಭಾಗಿಯಾಗಿದ್ದರು.

ಇತ್ತ ಪಾಕ್ ಕಾರ್ಯಕ್ರಮದಲ್ಲಿ ಭಾರತದ ಸಚಿವೆ ಭಾಗವಹಿಸಿರುವುದು ದ್ವಿಪಕ್ಷೀಯ ಸಂಬಂಧದ ಆರಂಭದ ಸೂಚನೆ ಅಲ್ಲ. ಕಳೆದ 20 ವರ್ಷಗಳಿಂದ ಈ ಕಾರಿಡಾರ್ ಆರಂಭ ಮಾಡಲು ಭಾರತ ಮನವಿ ಸಲ್ಲಿಸಿತ್ತು. ಇದೇ ಮೊದಲ ಬಾರಿ ಪಾಕ್ ಪ್ರತಿಕ್ರಿಯೆ ನೀಡಿದೆ. ಆದರೆ ಭಯೋತ್ಪಾದನೆಗೆ ಪಾಕ್ ಸಂಪೂರ್ಣವಾಗಿ ಬೆಂಬಲ ನೀಡುವುದನ್ನು ನಿಲ್ಲಿಸಿದ ಬಳಿಕವೇ ಮಾತುಕತೆ ಆರಂಭವಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *