ಕೆಡಿಪಿ ಸಭೆಗೆ ಮಾಧ್ಯಮದವರಿಗೆ ನಿರ್ಬಂಧ ಹಾಕಿದ್ರು ಅನಿತಾ..!

-ಪತಿಯಂತೆ ಮೀಡಿಯಾದಿಂದ ಅಂತರ ಕಾಯ್ದುಕೊಂಡ್ರಾ ನೂತನ ಶಾಸಕಿ

ರಾಮನಗರ: ಜಿಲ್ಲೆಯ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿಯವರು ಕ್ಷೇತ್ರದ ಕಾರ್ಯಕ್ರಮಗಳತ್ತ ಮುಖ ಮಾಡಿದ್ದು ಇಂದು ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಿದ್ದಾರೆ.

ರಾಮನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲಾಖಾವಾರು ಅಧಿಕಾರಿಗಳ ಸಭೆಯನ್ನು ಅನಿತಾ ಕುಮಾರಸ್ವಾಮಿ ಅವರು ನಡೆಸಿದ್ದಾರೆ. ಆದರೆ ಮಾಧ್ಯಮವರನ್ನ ಪ್ರಗತಿ ಪರಿಶೀಲನೆ ಸಭೆಯಿಂದ ದೂರವಿಟ್ಟು ಅನಿತಾ ಕುಮಾರಸ್ವಾಮಿಯವರು ಪತಿಯಂತೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಸಭೆಗೆ ಆಗಮಿಸಿದ್ದ ಶಾಸಕಿ, ಮಾಧ್ಯಮದವರು ಒಳಗಿರುವುದನ್ನು ಕಂಡು ಹೊರಗೆ ಹೋಗುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೆಡಿಪಿ ಸಭೆಯಿಂದ ಮಾಧ್ಯಮದವರನ್ನ ಹೊರ ಕಳುಹಿಸುವಂತಹ ಕೆಲಸವನ್ನ ರಾಮನಗರ ನೂತನ ಶಾಸಕಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ರೆ ಸಾಕೇ? ಜನಸಾಮಾನ್ಯರಿಗೆ ಮಾಹಿತಿ ಸಿಗುವುದಾದ್ರೂ ಹೇಗೆ? ಎಂದು ಸಾರ್ವಜನಿಕರು ಮಾಧ್ಯಮದವರನ್ನು ಹೊರ ಕಳುಹಿಸಿದ್ದಕ್ಕೆ ಅನಿತಾ ಕುಮಾರಸ್ವಾಮಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *