ರಮ್ಯಾಗೆ ನಟ ಜಗ್ಗೇಶ್‍ರಿಂದ ಸಖತ್ ಕ್ಲಾಸ್

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಬಾರದ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ನವರಸನಾಯಕ ಜಗ್ಗೇಶ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಟ್ವಿಟ್ಟರಿನಲ್ಲಿ ಅಭಿಮಾನಿಯೊಬ್ಬರು, “ಕಡೆಯಾಗ ನೋಡಿದೋಳೋನಾ ಕಡೆಗಣಿಸೋದೆ ತಕ್ಕ ಉತ್ತರ. ಹತ್ತಿದ ಏಣಿನಾ ಮರೆಯೋ ಇಂಥೋರನ್ನಾ ನೆನಿಲುಬಾರದು” ಡ್ರಾಮಾ ಕ್ವೀನ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿದ್ದರು.

ಅಭಿಮಾನಿಯ ಟ್ವೀಟ್‍ಗೆ ಜಗ್ಗೇಶ್ ಪ್ರತಿಕ್ರಿಯಿಸಿ, “ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು. ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು. ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ. ಯತಃ ಮನಃ ತಥಃ ಜೀವನ ಎಂದು ಜಗ್ಗೇಶ್ ರೀ-ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಅವರ ಟ್ವೀಟ್‍ಗೆ ಅಭಿಮಾನಿಗಳು ರೀ-ಟ್ವೀಟ್ ಮಾಡಿ, “7,500 ಕಿಲೋಮೀಟರ್ ನಿಂದ ದರ್ಶನ್ ಅವರು ತನ್ನ ತಂದೆ ಸಮಾನ ಅಂಬಿ ಅವರ ದರ್ಶನಕ್ಕೆ ಬಂದಿದ್ದಾರೆ. ಭಾರತೀಯ ಚಿತ್ರರಂಗ, ರಾಜಕೀಯ ಕ್ಷೇತ್ರ, ಕೋಟ್ಯಂತರ ಅಭಿಮಾನಿಗಳು ಅಂಬಿ ಅಣ್ಣನ ಸಾವಿಗೆ ಕಂಬನಿ ಮಿಡಿದಿದೆ. ಶ್ರೇಷ್ಠ ವ್ಯಕ್ತಿಯ ಅಂತಿಮ ದರ್ಶನ ಸಿಗುವುದಕ್ಕೂ ಯೋಗ್ಯತೆ ಬೇಕು. ಅಂತಹದರಲ್ಲಿ ಈ ರಮ್ಯಾಗೆ ಎಲ್ಲಿದೆ ಯೋಗ್ಯತೆ” ಎಂದು ರೀ-ಟ್ವೀಟ್ ಮಾಡಿದ್ದಾರೆ.

ಮತ್ತೆ ಕೆಲವರು ನಮ್ ಮಂಡ್ಯ ರೈತರ ಪಾದದ ಧೂಳಿಗ್ ಸಮ ಇಲ್ಲದೇ ಹೋಗಿರೋರು ಬಂದರೆಷ್ಟು ಬಿಟ್ಟರೆಷ್ಟು. ನಮ್ಮ ಮಂಡ್ಯ ಮಣ್ಣಿನ ತಿಲಕ ಅಣ್ಣನ್ ಹಣೆಗೆ ಇಟ್ಟಾಗೇ ಅಣ್ಣನ್ ಆತ್ಮಕ್ಕೆ ಶಾಂತಿ ಸಿಕ್ಕಾಯ್ತು ಎಂದು ಟ್ವೀಟ್ ಮಾಡಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *