ಕಲಬುರಗಿ: ಉತ್ತರ ಕರ್ನಾಟಕದ ಅಲೆಮಾರಿ ಜನಾಂಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಹಲವು ಯೋಜನೆಯನ್ನು ಸರ್ಕಾರ ರೂಪಿಸಿದೆ. ಇಂದಿಗೂ ಸಹ ಆ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ. ಇದನ್ನು ಅರಿತ ಕಲಬುರಗಿಯ ಸೊನ್ನ ಮಠದ ಶ್ರೀಗಳು ಅಲೆಮಾರಿ ಮತ್ತು ಅನಾಥ ಮಕ್ಕಳ ಪಾಲಿನ ಬೆಳಕಾಗಿದ್ದಾರೆ.
ಶಾಲೆಯಲ್ಲಿ ಮಕ್ಕಳ ಲಾಲನೆ ಪಾಲನೆ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಡಾ.ಶಿವಾನಂದ ಸ್ವಾಮೀಜಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ವಿರಕ್ತ ಮಠದ ಪೀಠಾಧಿಪತಿಗಳು. ಪ್ರವಚನದ ಮೂಲಕ ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜೊತೆಗೆ, ಖುದ್ದು ಸೊನ್ನ ಗ್ರಾಮದಲ್ಲಿ ಶಾಲೆ ಆರಂಭಿಸಿದ್ದಾರೆ. ಶಾಲೆಯಲ್ಲಿ ನೂರಾರು ಅನಾಥ ಮಕ್ಕಳು ಹಾಗು ಅಲೆಮಾರಿ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿಯನ್ನೂ ಕಲ್ಪಿಸಿದ್ದಾರೆ.
ಶ್ರೀಗಳ ಕಾರ್ಯ ಕಂಡ ರಾಜ್ಯ ಸರ್ಕಾರ 25 ಅಲೆಮಾರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಲೆಮಾರಿ ಶಾಲೆಯ ಅನುಮತಿ ನೀಡಿದೆ. ಶಾಲೆಯಲ್ಲಿ ನೂರಕ್ಕೂ ಹೆಚ್ಚು ಅಲೆಮಾರಿ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಅಲೆಮಾರಿ ಮತ್ತು ಅನಾಥ ಮಕ್ಕಳ ನಂದಾದೀಪ ಅಂತಾನೆ ಖ್ಯಾತಿ ಪಡೆದಿರೋ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
https://www.youtube.com/watch?v=wVqJyzWs94w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply