ಬೆಂಗ್ಳೂರಿನಲ್ಲಿ ಲವ್ ಜಿಹಾದ್- ಮುಸ್ಲಿಂ ಹುಡುಗನನ್ನು ವರಿಸಿದವಳು ಸೂಸೈಡ್

– ಪತಿಯ ವಿರುದ್ಧವೇ ಕೇಳಿಬಂತು ಕೊಲೆ ಆರೋಪ

ಬೆಂಗಳೂರು: ನವ ವಿವಾಹಿತೆಯೊಬ್ಬಳು ನೇಣಿಗೆ ಕೊರಳೊಡ್ಡಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ರೋಜ ನೇಣಿಗೆ ಶರಣಾದ ವಿವಾಹಿತೆ. ಈಕೆ ಮೂಲತಃ ಬಾಗೇಪಲ್ಲಿಯವಳು. ತಂದೆ ಇಲ್ಲದ ಮಗಳೆಂದು ಪ್ರೀತಿಯಿಂದ ಸಾಕಿದ ತಾಯಿ, ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ರು. ಅದರಂತೆ ಯುವತಿ ಪಿಯೂಸಿ ಮುಗಿಸಿ ಡಿಗ್ರಿಗೆ ಅಂತ ಬಾಗೇಪಲ್ಲಿಯ ಬಳಿಯ ಖಾಸಗಿ ಕಾಲೇಜಿಗೆ ಸೇರಿದಳು. ಆದ್ರೆ ಈ ವೇಳೆ ಪರಿಚಯವಾದ ಬಾಬಾಜಾನ್ ಎಂಬಾತನ ಜೊತೆ ಆಕೆಗೆ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಮದುವೆಯಾಗುವ ನಿಶ್ಚಯ ಮಾಡಿದ್ದಾರೆ. ಈ ವೇಳೆ ಯುವಕ ಮುಸ್ಲಿಂ ಹಾಗೂ ಯುವತಿ ಹಿಂದೂ ಆದ ಕಾರಣ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೂ ಯುವಕನ ನಂಬಿ ಬಂದ ಯುವತಿ ಬುಧವಾರ ಸಾವನ್ನಪ್ಪಿದ್ದಾಳೆ.

ಹೌದು, ಕಳೆದ ನಾಲ್ಕು ತಿಂಗಳ ಹಿಂದೆ ಯುವಕ ಬಾಬಾಜಾನ್ ಎಂಬಾತನ ಜೊತೆ ಮನೆತೊರೆದ ಯುವತಿ ನಗರದ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬಾಬಾಜಾನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ರೋಜ ಮನೆಯಲ್ಲೇ ಇರುತ್ತಿದ್ದಳು ಎನ್ನಲಾಗುತ್ತಿದೆ. ನಿನ್ನೆ ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ತನ್ನ ಪತಿಯ ಗೆಳೆಯನಾದ ಶ್ರೀನಿವಾಸ್ ನಿಗೆ ಚಿಕನ್ ತರಲು ತಿಳಿಸಿದ್ದಾಳೆ. ಪತಿ ಕೆಲಸ ಮುಗಿಸಿ ಬರೋ ಮುನ್ನ ಅಡುಗೆ ಮಾಡಬೇಕು ಅಂತ ಹೇಳಿದ್ದಾಳೆ. ಇನ್ನು ಅದರಂತೆ ಇಂದು ಸಂಜೆ ಮನೆ ಬಳಿ ಬಂದ ಶ್ರೀನಿವಾಸ್ ಗೆ ಡೋರ್ ಒಳಗಡೆಯಿಂದ ಲಾಕ್ ಆಗಿರೋದು ಗೊತ್ತಾಗಿದೆ. ಎಷ್ಟು ಬಾಗಿಲು ತಟ್ಟಿದ್ರೂ ಓಪನ್ ಆಗದ ಹಿನ್ನೆಲೆಯಲ್ಲಿ ಹಿಂದಿನ ಬಾಗಿಲಿನಿಂದ ಒಳಗೆ ನೋಡಿದಾಗ ಆಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಅಂತ ಬಾಬಾಜಾನ್ ಗೆಳೆಯ ಶ್ರೀನಿವಾಸ್ ಹೇಳಿದ್ದಾರೆ.

ಬಾಬಾ ಜಾನ್ ರೋಜಳನ್ನ ಬಲವಂತವಾಗಿ ಬ್ಲಾಕ್‍ಮೇಲ್ ಮಾಡಿ ಕರೆದುಕೊಂಡು ಬಂದಿದ್ದಾನೆ. ಇದು ಆತ್ಮಹತ್ಯೆಯಲ್ಲ ಕೊಲೆ. ಅಲ್ಲದೆ, ಆಕೆ ಚೆನ್ನಾಗಿ ಓದುವ ಆಸೆ ಕಂಡಿದ್ದಳು. ಆದ್ರೆ ಅದ್ಯಾವುದಕ್ಕೂ ಆಸ್ಪದ ನೀಡದ ಆತ ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.

ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಬಾಜಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *