ಕ್ವೀನ್ಸ್ ಲ್ಯಾಂಡ್: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಆಸ್ಟ್ರೇಲಿಯಾ ವಿರುದ್ಧ ಟಿ 20 ಪಂದ್ಯದಲ್ಲಿ ಕೆಟ್ಟದಾಗಿ ಬಾಲ್ ಎಸೆದು ಸುದ್ದಿಯಾಗಿದ್ದಾರೆ.
9ನೇ ಓವರ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಕ್ರೀಸ್ ನಲ್ಲಿದ್ದರು. ವೇಗವಾಗಿ ಬಂದ ರಬಾಡ ಬಾಲ್ ಎಸೆದಿದ್ದಾರೆ. ಎಸೆದ ಬಾಲ್ ಮೇಲಕ್ಕೆ ಹಾರಿ ಎಡಗಡೆಗೆ ಹೋಗಿ ಪಾಯಿಂಟ್ ಬಳಿ ನಿಂತಿದ್ದ ಫೀಲ್ಡರ್ ಬಳಿ ಬಿದ್ದಿದೆ. ಬಾಲ್ ಎಲ್ಲಿಗೋ ಹೋಗಿದ್ದನ್ನು ನೋಡಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.

ಈ ಎಸೆತಕ್ಕೆ ಏನು ತೀರ್ಪು ನೀಡಬೇಕು ಅಂಪೈರ್ ಗೆ ಗೊಂದಲ ಉಂಟಾಗಿ ಲೆಗ್ ಅಂಪೈರ್ ಜೊತೆ ಚರ್ಚಿಸಿದರು. ಬಳಿಕ ಡೆಡ್ ಬಾಲ್ ಎಂದು ಘೋಷಣೆ ಮಾಡಿದರು. ಈಗ ರಬಾಡ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಶ್ವದ ಕ್ರಿಕೆಟ್ ನ ಅಂತ್ಯ ಕೆಟ್ಟ ಎಸೆತಗಳಲ್ಲಿ ಇಂದು ಒಂದು ಹೇಳಿ ಜನ ಕಮೆಂಟ್ ಮಾಡುತ್ತಿದ್ದಾರೆ.
ಮಳೆಯಿಂದಾಗಿ 10 ಓವರ್ ಕಡಿತಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ನಿಗದಿತ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತು. 21 ರನ್ ಗಳಿಂದ ದಕ್ಷಿಣ ಆಫ್ರಿಕಾ ಪಂದ್ಯವನ್ನು ಜಯಗಳಿಸಿತು.
BALLLLL
RABADA KE BALLLLLLLLLLL 🤣🤣 #AUSvSA #RABADA pic.twitter.com/6Pf0juks01— Aditya_07 (@BezawadaAditya) November 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply