ಏಮ್ಸ್ ನವರ ಅವೈಜ್ಞಾನಿಕ ರೂಲ್ಸ್ ಗೆ ಮಹಿಳೆಯರು ಶಾಕ್

ಬೆಂಗಳೂರು: ನಗರದ ಜ್ಞಾನಭಾರತಿ ಬಳಿಯ ಉಲ್ಲಾಳದಲ್ಲಿ ಏಮ್ಸ್ ವತಿಯಿಂದ ಅಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಕ್ಸಾಂ ಇತ್ತು. ಆದರೆ ಎಕ್ಸಾಂ ಹಾಲ್‍ಗೆ ಹೋಗೋ ಮುನ್ನ ಮಹಿಳೆಯರು ತಾಳಿ, ಕಾಲುಂಗುರ, ಮೂಗುತಿ ಬಿಚ್ಚಿಟ್ಟು ಒಳಗೆ ಹೋಗುವಂತೆ ರೂಲ್ಸ್ ಮಾಡಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಮಹಿಳೆಯೊಬ್ಬರು ಪರೀಕ್ಷೆಯನ್ನು ಬರೆಯಲಿಲ್ಲ.

ದೇಶದ ಬೇರೆ ಬೇರೆ ಕಡೆಯಿಂದ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು – ಪುರುಷರು ಪರೀಕ್ಷೆಗೆ ಬಂದಿದ್ದರು. ಪರೀಕ್ಷಾ ಕೊಠಡಿ ಒಳಗೆ ಯಾರು ಕೂಡ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮವನ್ನು ಮಾಡಲಾಗಿತ್ತು. ಇದರ ಜೊತೆಗೆ ಮಹಿಳೆಯರು ತಮ್ಮ ತಾಳಿ, ಕಾಲುಂಗುರ, ಮೂಗುತಿ ಕೂಡ ಬಿಚ್ಚಿಟ್ಟು ಒಳಗೆ ಹೋಗುವಂತೆ ಮಾಡಿದ್ದ ಹೊಸ ನಿಯಮವನ್ನು ಕೆಲವರು ವಿರೋಧಿಸಿದರು.

ಪರೀಕ್ಷೆ ಬರೆಯಲು ಬಂದವರಲ್ಲಿ ಬಹುತೇಕರಿಗೆ ಮದುವೆ ಆಗಿತ್ತು. ಏಮ್ಸ್ ನವರ ಈ ರೂಲ್ಸ್ ನೋಡಿ ಅನಿವಾರ್ಯವಾಗಿ ಕೆಲವರು ತಾಳಿ,ಕಾಲುಂಗುರ ತೆಗೆದು ಒಳಗೆ ಹೋಗಿದ್ದರು. ಆಂಧ್ರಪ್ರದೇಶ ಮೂಲದ ರಾಧಶ್ರೀ ಎಂಬ ಮಹಿಳೆ ಮಾತ್ರ ನಾನು ತಾಳಿ, ಕಾಲುಂಗುರ ತೆಗೆಯಲ್ಲ ಅಂತಾ ಪಟ್ಟು ಹಿಡಿದಿದ್ದರು. ಇದರಿಂದ ಕೆರಳಿದ ಸಿಬ್ಬಂದಿ ಎಗ್ಸಾಂ ಹಾಲ್ ನಿಂದ ರಾಧಶ್ರೀಯನ್ನು ಹೊರಗೆ ಹಾಕಿದರು. ಈ ಅವೈಜ್ಞಾನಿಕ ರೂಲ್ಸ್ ನಿಂದ ಬೇಸತ್ತ ಮಹಿಳೆ ಅಸಹಾಯಕರಾಗಿ ಪರೀಕ್ಷೆಯಿಂದ ದೂರ ಉಳಿಯಬೇಕಾಯಿತು.

ವಿಚಾರ ತಿಳಿದ ಜ್ಞಾನ ಭಾರತಿ ಪೋಲೀಸರು, ಸ್ಥಳಕ್ಕೆ ಬಂದು ರಾಧಶ್ರೀಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡೋ ಹೊತ್ತಿಗೆ ಪರೀಕ್ಷೆಯೇ ಮುಗಿದಿತ್ತು. ಏಮ್ಸ್ ನವರ ಈ ರೂಲ್ಸ್ ವಿರುದ್ಧ ಸಾರ್ವಜನಿಕರು ಫುಲ್ ಗರಂ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ನೊಂದ ಮಹಿಳೆಗೆ ನ್ಯಾಯ ಕೊಡಿಸ್ತಾರಾ ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *