ಕಾರವಾರ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಾಕಿದ್ದ ಗಂಡಾನೆಯೊಂದು ಬಲಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ಪಣಸೋಲಿ ತಾಣದಲ್ಲಿ ನಡೆದಿದೆ.
ಅರಣ್ಯದಲ್ಲಿ ಸಫಾರಿ ನಡೆಸಲು ಮೂರು ಆನೆಗಳನ್ನು ಅರಣ್ಯ ಇಲಾಖೆ ಸಾಕಿತ್ತು. ಎಂದಿನಂತೆ ಪಣಸೋಲಿಯ ಅರಣ್ಯಕ್ಕೆ ಆನೆಗಳನ್ನು ಮೇಯಲು ಬಿಟ್ಟಾಗ ಕಾಡಿನಲ್ಲಿ ರಾಜೇಶ್ (57) ಆನೆಯ ಮೇಲೆ ಎರಡು ಗಂಡಾನೆಗಳು ದಾಳಿ ನಡೆಸಿದೆ.
ಕಾಡಾನೆ ದಾಳಿಯಿಂದ ರಾಜೇಶ್ ತೀವ್ರವಾಗಿ ಗಾಯಗೊಂಡಿತ್ತು. ಈ ಸುದ್ದಿ ಕುರಿತು ಮಾಹಿತಿ ಪಡೆದ ಜೋಯಿಡಾ ಅರಣ್ಯಾಧಿಕಾರಿಗಳು ರಾಜೇಶ್ ಗೆ ಶಿವಮೊಗ್ಗ ಜಿಲ್ಲೆಯ ಸಕ್ಕರೆ ಬೈಲಿನ ಆನೆ ಬಿಡಾರದ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾಜೇಶ್ ಸಾವನ್ನಪ್ಪಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply