ಮನೆ ಮುಂದೆ ಬಂದ ಕೋತಿಯ ಕುತ್ತಿಗೆಗೆ ಗುಂಡಿಕ್ಕಿದ ಮಾಜಿ ಸೈನಿಕ

ಬೆಳಗಾವಿ: ಜಿಲ್ಲೆಯ ಪಂತ ಬಾಳೆಕುಂದ್ರಿಯಲ್ಲಿ ಮಾಜಿ ಸೈನಿಕ ತನ್ನ ಮನೆಯ ಮುಂದೆ ನಾಯಿ, ಬೆಕ್ಕು ಮತ್ತು ಹಂದಿ ಅಷ್ಟೇ ಏಕೆ ಯಾವ ಪ್ರಾಣಿಯು ಬಂದರೂ ಅದಕ್ಕೆ ಗುಂಡು ಹೊಡೆದು ಉರುಳಿಸುತ್ತಾನೆ. ಅದೇ ರೀತಿ ಮಂಗವೊಂದು ಮನೆಯ ಮಂದೆ ಬಂತು ಎಂದು ಗನ್ ಎತ್ತಿಕೊಂಡು ಮಂಗನ ಕುತ್ತಿಗೆಗೆ ಗುಂಡಿಕ್ಕಿದ್ದಾನೆ.

ಪಂತ ಬಾಳೆಕುಂದ್ರಿಯ ನಿವೃತ್ತ ಯೋಧ ಮಹ್ಮದಹುಸೇನ್ ಶೇಖ್ ಮಂಗನಿಗೆ ಗುಂಡು ಹೊಡೆದಿದ್ದಾನೆ. ಶುಕ್ರವಾರ ಮಧ್ಯಾಹ್ನ ಪಂತ ನಗರದಲ್ಲಿರುವ ಆರೋಪಿ ಶೇಖ್ ಮನೆಯ ಮುಂದೆ ಕರಿಮಂಗ ಬಂದು ಪ್ರಾಣ ಕಳೆದುಕೊಂಡಿದೆ. ಇದರಿಂದ ಆಕ್ರೋಶಗೊಂಡ ಸ್ಥಳಿಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಹಿಂದೆ ನವಿಲು, ನಾಯಿ, ಬೆಕ್ಕು, ಮೊಲ ಬೇಟೆಯಾಡಿದ ಆರೋಪ ಶೇಖ್ ಮೇಲಿದೆ. ಕಾಡುಪ್ರಾಣಿ ಹತ್ಯೆ ನಿಷೇಧ ಕಾಯ್ದೆಯಡಿ ಬೆಳಗಾವಿ ನೆಸರಗಿ ವಲಯದ ಅರಣ್ಯ ಕಚೇರಿಯಲ್ಲಿ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸದ್ಯಕ್ಕೆ ಸಾಂಬ್ರಾ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಮೃತ ಮಂಗನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋತಿ ಸುತ್ತು ಹೋದ ಮೇಲೆ ಊರಿನ ಜನರೆಲ್ಲಾ ಸೇರಿ ಪೂಜೆ ಮಾಡಿ ಮಣ್ಣು ಮಾಡಿದ್ದಾರೆ. ಇತ್ತ ಅರಣ್ಯ ಅಧಿಕಾರಿಗಳು ಆರೋಪಿ ಶೇಖ್‍ ಗಾಗಿ ಶೋಧನೆ ಕಾರ್ಯ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *