ಮಹಿಳಾ ಕೈದಿಗಳ ಕೈಯಲ್ಲಿ ಅರಳಿತು ಬಣ್ಣ ಬಣ್ಣದ ದೀಪ, ಮೇಣದ ಬತ್ತಿ

ಧಾರವಾಡ: ದೀಪಾವಳಿ ಹಬ್ಬ ಬಂದ್ರೆ ಸಾಕು ಮಾರುಕಟ್ಟೆಗೆ ವಿವಿಧ ರೀತಿಯ ಬಣ್ಣ ಬಣ್ಣದ ದೀಪದ ಹಣತೆಗಳು ರಾರಾಜಿಸುತ್ತವೆ. ಅಷ್ಟೆ ಅಲ್ಲದೆ ವಿವಿಧ ರೀತಿಯ ವಿದ್ಯುತ್ ಅಲಂಕಾರಿಕ ವಸ್ತುಗಳು ಲಗ್ಗೆಯಿಟ್ಟು, ಗುಡಿಕೈಗಾರಿಕೆಗಳಿಗೆ ಮಾರಕವಾಗಿವೆ. ಇವೆಲ್ಲದರ ನಡುವೆಯೇ ಧಾರವಾಡದ ಜೈಲಿನ ಮಹಿಳಾ ಕೈದಿಗಳು ಬಣ್ಣ ಬಣ್ಣದ ದೀಪ, ಮೇಣದ ಬತ್ತಿಗಳ ತಯಾರಿಕೆಗೆ ಇಳಿದಿದ್ದಾರೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿಗ ಬಣ್ಣ ಬಣ್ಣ ದೀಪಗಳನ್ನು ತಯಾರಿಸಿ ಮಾರಾಟ ಮಾಡಲು ಸಜ್ಜಾಗಿದ್ದಾರೆ. ಬಂಧಿತ ಕೈದಿಗಳು ಇಂತಹ ಕೆಲಸಕ್ಕೆ ಮುಂದಾಗಿದ್ದು ಜೈಲು ಅಧೀಕ್ಷಕಿ ಅನಿತಾ ಅವರು ಎಲ್ಲ ಸಹಕಾರವನ್ನು ನೀಡಿದ್ದಾರೆ.

ಜೈಲು ಅಧೀಕ್ಷಕಿ ಅನಿತಾ ಈ ಬಗ್ಗೆ ಮಾತನಾಡಿ, ಸುಮಾರು 15-20 ಮಂದಿ ಮಹಿಳಾ ಕೈದಿಗಳು ಬಣ್ಣದ ದೀಪ ಹಾಗೂ ಮೇಣದ ಬತ್ತಿಗಳನ್ನು ತಯಾರಿಸಿದ್ದಾರೆ. ಸುಮಾರು 3 ಸಾವಿರ ದೀಪಗಳು ಈಗಾಗಲೇ ತಯಾರಾಗಿದೆ. ಅದನ್ನು ಜೈಲು ಸಮೀಪವಿರುವ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಮಹಿಳಾ ಬಂಧಿಗಳನ್ನು ಚಟುವಟಿಕೆಯಲ್ಲಿರುವಂತೆ ಮಾಡುವ ಉದ್ದೇಶವಾಗಿದೆ. ಇಲ್ಲಿನ ಕೈದಿಗಳು ಬಿಡುಗಡೆಯ ನಂತರವು ಸಹ ಈ ಕೌಶಲ್ಯ ಅವರ ಜೀವನ ರೂಪಿಸಿಕೊಳ್ಳುವಲ್ಲಿ ಅನೂಕುಲವಾಗಲಿದೆ ಎನ್ನುತ್ತಾರೆ. ಈ ಬಾರಿಯ ಈ ದೀಪಾವಳಿ ಹಬ್ಬಕ್ಕೆ ಮೂರು ಸಾವಿರ ಬಣ್ಣದ ದೀಪ ಹಾಗೂ ಮೇಣದ ಬತ್ತಿ ತಯಾರಿಸಿದ್ದಾರೆ ಅಂತ ಹೇಳಿದ್ರು.

ಮಹಿಳಾ ಕೈದಿಗಳು ಈ ಬಾರಿ ದೀಪಾವಳಿ ಪರಿಣಿತಿಯನ್ನು ಮಾಡಿದ್ದಾರೆ. ಆದ್ರೆ ಅದಕ್ಕೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ ಅಂತ ಜೈಲು ಅಧೀಕ್ಷಕಿ ಹೇಳಿದಾಗ, ಇದೆಲ್ಲಾ ನಮ್ಮ ಜವಾಬ್ದಾರಿ ಅಂತ ನನಗೆ ಅನ್ನಿಸಿತ್ತು. ಕೈದಿಗಳು ಮಾಡುವ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯನ್ನು ಒದಗಿಸಿದ್ರೆ ಅವರ ಆರ್ಥಿಕ ಪರಿಸ್ಥಿತಿ ಬದಲಾಗುವುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಅವರಲ್ಲಿ ಅಪರಾಧಿ ಎಂಬ ಮನೋಭಾವದಿಂದ ಹೊರಬಂದು ಆತ್ಮಗೌರವ ಹುಟ್ಟಿಸುವಲ್ಲಿ ನೆರವಾಗುತ್ತದೆ. ಹೀಗಾಗಿ ಸರ್ಕಾರ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳು ಇಂತಹ ಒಂದು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು ಅಂತ ಹಣತೆ ಮಾರಾಟದ ಉಸ್ತುವಾರಿ ವಹಿಸಿಕೊಂಡ ಸುಜಾತಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *