ಮಧ್ಯಪ್ರದೇಶದ ಸಿಎಂ ಅಳಿಯ ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ ವಿಧಾನಸಭಾ ಚುನಾವಣೆ ಸಿದ್ಧತೆ ಭರದಿಂದ ಸಾಗಿದ್ದು, ಪಕ್ಷ ಬದಲಾವಣೆ, ಸೇರ್ಪಡೆ ಕೂಡ ಅಷ್ಟೇ ಬಿರುಸಿನಿಂದ ಸಾಗಿಸಿದೆ.

ಈ ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾನ್ ಪತ್ನಿಯ ಸಹೋದರ ಸಂಜಯ್ ಸಿಂಗ್ ಮಸಾನಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಕೇಂದ್ರ ಸಚಿವ ಕಮಲ್ ನಾಥ್ ಹಾಗೂ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಜ್ಯೋತಿರಾಧಿತ್ಯಾ ಸಿಂಧಿಯಾ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಸೇರಿದ್ದಾರೆ.

ಪಕ್ಷಕ್ಕೆ ಸೇರಿದ ಮೊದಲ ದಿನವೇ ಮಾವನ ವಿರುದ್ಧ ವಾಗ್ದಾಳಿ ನಡೆಸಿದ ಸಂಜಯ್ ಸಿಂಗ್ ಮಸಾನಿ ಅವರು ಮಧ್ಯಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಕೈಗಾರಿಕೆಗಳು ಸ್ಥಾಪನೆ, ಉದ್ಯೋಗ ಸೃಷ್ಟಿ ಸೇರಿದಂತೆ ಯಾವುದೇ ಕೆಲಸಗಳು ರಾಜ್ಯದಲ್ಲಿ ಆಗಿಲ್ಲ. ಮುಖ್ಯಮಂತ್ರಿ ಶಿವರಾಜ್ ಅವರಿಗಿಂತ ಕಮಲ್ ನಾಥ್ ಅವರ ಅಗತ್ಯತೆ ಮಧ್ಯಪ್ರದೇಶಕ್ಕೆ ಇದೆ ಎಂದರು.

ವಿಧಾನಸಭಾ ಚುನಾವಣೆಯ 177 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ನಾಯಕರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸಿಎಂ ಶಿವರಾಜ್ ಸಿಂಗ್ ಅವರು ತಮ್ಮ ಪುತ್ರ, ಸಂಬಂಧಿಕರಿಗೆ, ಆಪ್ತರಿಗೆ ಟಿಕೆಟ್ ನೀಡಲಾಗಿದೆ. ನನ್ನ ಕುಟಂಬ, ಕುಲವೇ ಬೇರೆ ಮುಖ್ಯಮಂತ್ರಿಗಳ ಕುಟಂಬವೇ ಬೇರೆ. ಇದು ರಾಜಕೀಯ ವಿಚಾರ ಅಷ್ಟೇ ಎಂದು ಸಂಜಯ್ ಸಿಂಗ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *