ಶಿವರಾಜ್‍ಕುಮಾರ್ 125ನೇ ಚಿತ್ರ ಯಾವುದು ಗೊತ್ತಾ?

ವಯಸ್ಸಿನ ಹಂಗಿಲ್ಲದೇ ಈವತ್ತಿಗೂ ಯಂಗ್ ಆಂಡ್ ಎನರ್ಜಿಟಿಕ್ ಹೀರೋ ಆಗಿಯೇ ಚಾಲ್ತಿಯಲ್ಲಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಒಂದರ ಹಿಂದೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡು ಎಲ್ಲವನ್ನೂ ವೇಗವಾಗಿ ಮುಗಿಸಿ ಕೊಡುವ ಶಿವಣ್ಣ ಯುವ ನಟರ ಪಾಲಿಗೂ ಅಚ್ಚರಿಯಾಗಿದ್ದಾರೆ. ತಮ್ಮ ಇದುವರೆಗಿನ ಸಿನಿಮಾ ಯಾನದಲ್ಲಿ ಥರ ಥರದ ಪಾತ್ರ ಮಾಡಿರೋ ಶಿವಣ್ಣ ಈಗ 125ನೇ ಚಿತ್ರದತ್ತ ಸಾಗಿ ಬಂದಿದ್ದಾರೆ. ಅವರ ನೂರಾ ಇಪ್ಪತೈದನೇ ಚಿತ್ರ ಯಾವುದೆಂಬುದೂ ಇದೀಗ ಜಾಹೀರಾಗಿದೆ!

ಶಿವಣ್ಣ ಈ ಹಿಂದೆ ಶ್ರೀ ಮುರುಳಿ ಅವರ ಜೊತೆ ಮಫ್ತಿ ಚಿತ್ರದಲ್ಲಿ ನಟಿಸಿದ್ದರಲ್ಲಾ? ಅದರಲ್ಲಿ ಅವರು ನಿರ್ವಹಿಸಿದ್ದ ಭೈರತಿ ರಣಗಲ್ ಎಂಬ ಪಾತ್ರ ಪ್ರೇಕ್ಷಕರನ್ನು ಕಾಡಿತ್ತು. ಲುಂಗಿಯುಟ್ಟುಕೊಂಡು ಡಿಫರೆಂಟಾದ ಜನಪರ ಡಾನ್ ಆಗಿ ನಟಿಸಿದ್ದ ಶಿವಣ್ಣನ ಅಭಿನಯ ನಿಜಕ್ಕೂ ಮೋಡಿ ಮಾಡಿತ್ತು. ಆ ಹೊತ್ತಿನಲ್ಲಿಯೇ ಶಿವಣ್ಣ ಭೈರತಿ ರಣಗಲ್ ಎಂಬ ಟೈಟಲ್ಲಿನದ್ದೊಂದು ಚಿತ್ರ ಮಾಡುತ್ತಾರೆಂದೂ ಸುದ್ದಿಯಾಗಿತ್ತು. ಇದೀಗ ಭೈರತಿ ರಣಗಲ್ ಶಿವಣ್ಣನ 125ನೇ ಚಿತ್ರವಾಗಿ ನಿಗದಿಯಾಗಿದೆ!

ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರನ್ನು ಇಂತಾದ್ದೊಂದು ಅಪರೂಪದ ಪಾತ್ರದಲ್ಲಿ ಮಿಂಚುವಂತೆ ಮಾಡಿದ್ದವರು ನಿರ್ದೇಶಕ ನರ್ತನ್. ಭೈರತಿ ರಣಗಲ್ ಚಿತ್ರವನ್ನೂ ಕೂಡಾ ಅವರೇ ನಿರ್ದೇಶನ ಮಾಡಲಿದ್ದಾರೆ. ಮಫ್ತಿಯನ್ನೇ ಮೀರಿಸುವಂಥಾ ಕಥೆಯೊಂದನ್ನು ಮಾಡಿಕೊಂಡಿರೋ ನರ್ತನ್ ಸ್ಕ್ರಿಪ್ಟ್ ಕೆಲಸವನ್ನೂ ಪೂರ್ತಿಗೊಳಿಸಿಕೊಂಡಿದ್ದಾರೆ. ಈ ಚಿತ್ರ ಶ್ರೀ ಮುತ್ತು ಸಿನಿ ಸರ್ವಿಸಸ್ ಲಾಂಛನದಡಿ ನಿರ್ಮಾಣಗೊಳ್ಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *