ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಹೇಳಿಕೆಗೆ ನಟಿ ಸಂಗೀತಾ ಭಟ್ ಪತಿ ಸುದರ್ಶನ್ ಭಟ್  2ನೇ ಸಲ ಚಿತ್ರೀಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್ ನೀಡಿದ್ದ ಹೇಳಿಕೆಗೆ ಸಂಗೀತಾ ಭಟ್ ಪತಿ ಸುದರ್ಶನ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಗುರುಪ್ರಸಾದ್ ಯಾವ ಕಾರಣಕ್ಕಾಗಿ 2ನೇ ಸಲ ಚಿತ್ರದ ಸನ್ನಿವೇಷದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಸಂಗೀತಾ ಚಿತ್ರರಂಗವನ್ನು ಬಿಟ್ಟಿದ್ದಾಳೆ. ಅವಳು ಯಾವುದೇ ಪಬ್ಲಿಸಿಟಿಗಾಗಿ ಮೀಟೂ ಆರೋಪ ಮಾಡಿಲ್ಲ. ಅದರ ಅವಶ್ಯಕತೆಯೂ ಆಕೆಗೆ ಇಲ್ಲ. ಆಕೆಯ ದಾರಿಯೇ ಈಗ ಬೇರೆಯಾಗಿದೆ. ಚಿತ್ರರಂಗದಲ್ಲಿದ್ದಾಗ ಆದಂತಹ ಘಟನೆಗಳ ಕುರಿತು ಅವಳು ಮಾತನಾಡಿದ್ದಳೆ ಹೊರತು, ಯಾರನ್ನು ನಿರ್ದಿಷ್ಟವಾಗಿ ಗುರುತಿಸಿ ಆಪಾದನೆ ಮಾಡಿಲ್ಲ. ಗುರುಪ್ರಸಾದ್ ಸುಮ್ಮನೆ ಆಕೆಯನ್ನು ಎಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

2ನೇ ಚಿತ್ರದಲ್ಲಿ ನಟಿಸಲು ಸಂಗೀತಾ ಗುರುಪ್ರಸಾದ್ ಬಳಿ ಹೋಗಿರಲಿಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಅವರೇ ಬಂದು, ನನ್ನ ಚಿತ್ರದಲ್ಲಿ ನಟಿಯಾಗಿ ಆಯ್ಕೆ ಮಾಡು ಎಂದು ಕೇಳಿದ್ದರು. ಈ ಮೊದಲು ಚಿತ್ರದಲ್ಲಿ ಆ ಸನ್ನಿವೇಷ ಇರಲಿಲ್ಲ. ನಂತರ ಇದನ್ನು ಗುರುಪ್ರಸಾದ್ ಸೇರಿಸಿದ್ದರು.

ನಮ್ಮೆಲ್ಲರ ಸಮ್ಮುಖದಲ್ಲೇ ಆ ಸನ್ನಿವೇಷ ಚಿತ್ರಿಕರಿಸಲಾಗಿತ್ತು. ಆದರೆ ಆ ಬಗ್ಗೆ ನಾವು ಯಾವುತ್ತೂ ಚಕಾರ ಎತ್ತಿರಲಿಲ್ಲ. ಆದರೆ ಅವರು ಅದನ್ನೇ ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ. ನಾವೆಲ್ಲಾ ಕಲಾವಿದರು, ಈ ರೀತಿಯ ಕೀಳು ಮಟ್ಟದಲ್ಲಿ ನಾವು ಯೋಚನೆ ಮಾಡುವುದಿಲ್ಲ. ಸಂಗೀತಾರ ಚಿತ್ರದ ಸನ್ನವೇಷವನ್ನು ಹೇಳುವ ಮೂಲಕ ಅವರ ಕೀಳು ಮಟ್ಟವನ್ನು ತೋರಿಸಿದ್ದಾರೆ ಎಂದು ಸುದರ್ಶನ್ ದೂಷಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/u4enQ9slDcc

Comments

Leave a Reply

Your email address will not be published. Required fields are marked *