ತಂದೆ ವಿಜಿ ವಿರುದ್ಧವೇ ಮಹಿಳಾ ಆಯೋಗದ ಮೆಟ್ಟಿಲೇರಿದ ಮೋನಿಷಾ

ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ವಿಜಿ ಪುತ್ರಿ ಮೋನಿಷಾ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಿ ಕೊಡಿ ಅಂತ ದುನಿಯಾ ವಿಜಿ ಎರಡನೇ ಮಗಳು ಮಕ್ಕಳು ಆಯೋಗಕ್ಕೆ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.

ಇನ್ನೆರಡು ದಿನದಲ್ಲಿ ವಿಜಿಗೆ ಹಾಗೂ ನಾಗರತ್ನಗೆ ನೋಟಿಸ್ ಆಯೋಗ ನೀಡುವ ಸಾಧ್ಯತೆಯಿದೆ. ವಿಜಿ ಕುಟುಂಬದ ವೈಮನಸ್ಸಿನಿಂದ ಮಕ್ಕಳ ಬದುಕು ಮೂರಾಬಟ್ಟೆಯಾಗಲು ಬಿಡಲ್ಲ ಅಂತ ಆಯೋಗ ಹೇಳಿದೆ. ವಿಜಿ ಮಗಳ ಲಿಖಿತ ದೂರಿನನ್ವಯ ನೋಟಿಸ್ ನೀಡಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಮಕ್ಕಳಿಗೆ ಆರ್ಥಿಕ ನೆರವಿನ ಬಗ್ಗೆ ಆಯೋಗ ಒಂದಿಷ್ಟು ಷರತ್ತು ವಿಧಿಸುವ ಸಾಧ್ಯತೆಗಳಿವೆ.

ಕೀರ್ತಿ ಗೌಡ ಮೇಲೆ ಹಲ್ಲೆ ನಡೆದಿರುವ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳಿಗೆ ಸಿಗುತ್ತಿದ್ದಂತೆಯೇ ವಿಜಯ್ ಮೊದಲನೇ ಪತ್ನಿ ನಾಗರತ್ನ ಪರಾರಿಯಾಗಿದ್ದು ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ಗಿರಿನಗರ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ನಾಗರತ್ನ ಸುಳಿವು ಮಾತ್ರ ಸಿಕ್ಕಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *