ಮನುಷ್ಯರ ಜೀವಕ್ಕೆ ಮಾರಕ ಕ್ಯಾಟ್ ಫಿಶ್ ದಂಧೆ-ಕಣ್ಮಚ್ಚಿ ಕುಳಿತ್ರಾ ಕುದೂರು ಪೊಲೀಸರು!

ರಾಮನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ತವರು ಜಿಲ್ಲೆ ರಾಮನಗರದಲ್ಲಿ ಕ್ಯಾಟ್ ಫಿಶ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾಗಡಿ ತಾಲೂಕಿನ ಕುದೂರು ಹೋಬಳಿಯ ಗುಂಡಿಗೆರೆ ಗ್ರಾಮದಲ್ಲಿನ ತೊಟ್ಟಿಗಳಲ್ಲಿ ವಿಷಕಾರಿ ಆಹಾರ ಕ್ಯಾಟ್ ಫಿಶ್ ಸಾಕಾಣಿಕೆ ನಡೆಯುತ್ತಿದೆ.

ಈ ಮೀನು ತಿಂದರೆ ಮನುಷ್ಯನ ಜೀವಕ್ಕೆ ಆಪತ್ತಾಗುತ್ತದೆ ಎಂದು ವೈದ್ಯಲೋಕವೇ ದೃಢಪಡಿಸಿದ್ದರೂ, ಈ ಮೀನಿನ ಸಾಕಾಣಿಕೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಬೆಂಗಳೂರಿನ ಯಲಹಂಕ ಮೂಲದ ಮೆಹಬೂಬ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಮಸಿಉಲ್ಲಾ ಎಂಬುವರು ಸಾಕಾಣಿಕೆ ಮಾಡುತ್ತಿದ್ದಾರೆ. ಒಂದೂವರೆ ಎಕರೆ ಜಮೀನಿನಲ್ಲಿ ಮೂರು ತೊಟ್ಟಿಗಳಲ್ಲಿ ಈ ಧಂದೆ ನಡೆಸುತ್ತಿದ್ದಾರೆ. ಇನ್ನೂ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಿದ್ದ ಕುದೂರು ಪೊಲೀಸರು ಮಾತ್ರ ಕಣ್ಮಚ್ಚಿ ಕುಳಿತ್ತಿದ್ದಾರೆ ಎಂದು ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರ ನಡೆಗೆ ಬೇಸರ ವ್ಯಕ್ತವಾಗಿದು, ಸಾಕಷ್ಟು ಅನುಮಾನಗಳು ಮೂಡಿಸಿವೆ ಅಲ್ಲದೆ, ಇದಕ್ಕೆ ಪೊಲೀಸರ ಕುಮ್ಮಕ್ಕು ಇದೆ ಎನ್ನಲಾಗಿದೆ. ಇದೇ ದಂಧೆಯಲ್ಲಿ ಕೆಲ ದಿನದ ಹಿಂದೆ ಅಕ್ರಮವಾಗಿ ಹಣ ಪಡೆಯಲು ಹೋಗಿ ಪಿಎಸ್‍ಐ ದಾಳೇಗೌಡ ಹಾಗು ಪಿಸಿ ಎಸಿಬಿ ಬಲೆಗೆ ಬಿದ್ದಿದ್ದರು, ಈ ಆಕ್ರಮ ಚಟುವಟಿಕೆಗಳು ರಾಜರೋಷವಾಗಿ ನಡಿಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *