ಬೆಂಗಳೂರು: ಹಿರಿಯ ಮಗ ರಾಕೇಶ್ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ, ನಿಮ್ಮ ಪಾಪದ ಶಿಕ್ಷೆಯನ್ನು ಮಕ್ಕಳಿಗೆ ದೇವರು ನೀಡದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಟ್ವೀಟ್ ಅನ್ನು ಐಎನ್‍ಸಿ ಕರ್ನಾಟಕ ಎಂಬ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

ಮಾಜಿ ಸಿಎಂ ಟ್ವೀಟ್ ನಲ್ಲೇನಿದೆ?:
ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಹೇಳಿದ್ದೇನು?:
ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾರೆ ಅಂತ ಪಬ್ಲಿಕ್ ಟಿವಿಯ ಸಂದರ್ಶನದ ವೇಳೆ ಹೇಳಿದ್ದರು.

ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ.@INCKarnataka
— Siddaramaiah (@siddaramaiah) October 30, 2018
https://www.youtube.com/watch?v=KUjH3iqmpEM

Leave a Reply