ಬೆಂಗಳೂರು: ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಘಟನೆ ಸೆ. 23ರಂದು ಭಾನುವಾರ ನಡೆದಿತ್ತು. ಈ ಸಂಬಂಧ ಕೀರ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ನಾಗರತ್ನ ಅವಳಿಗೆ ಮನುಷತ್ವ ಇಲ್ಲ. ದುನಿಯಾ ವಿಜಿ ಹಾಗೂ ಅವರ ತಂದೆ-ತಾಯಿಯ ಮಧ್ಯೆ ಹೋಗುವುದಿಲ್ಲ ಎಂದು ನಾಗರತ್ನ ಮ್ಯೂಚಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಳು. ಆಗ ನಾಗರತ್ನ ತನ್ನ ಪತಿ ದುನಿಯಾ ವಿಜಿ ದೂರ ಹೋಗುತ್ತಾರೆಂದು ನೋಡಿ ಅವರ ಬಳಿಯಿದ್ದ ಹಣವನ್ನೆಲ್ಲಾ ಪಡೆದಳು. ಅವರು ಕಷ್ಟಪಟ್ಟು ದುಡಿದ ಹಣವೆಲ್ಲ ನಾಗರತ್ನ ತೆಗೆದುಕೊಂಡು ಹೋಗಿದ್ದಳು. ವಿಜಿ ಕೂಡ ತಮ್ಮ ಪ್ರೀತಿಗಾಗಿ ಹಣವನ್ನು ಎಲ್ಲ ಬಿಟ್ಟು ಬಂದರು ಎಂದು ಕೀರ್ತಿಗೌಡ ಹೇಳಿದರು.

ನಾಗರತ್ನ ಓದಿರುವುದು 3ನೇ ತರಗತಿ. ವಿಜಿ ರಿಜಿಸ್ಟ್ರೇಷನ್ ಆಫೀಸ್ಗೆ ಹೋಗಿ ಎಲ್ಲವನ್ನೂ ಚೆಕ್ ಮಾಡಿಸಿ, ಸಂಪಾದನೆ ಮಾಡಿದ ಎಲ್ಲವನ್ನೂ ಕೊಟ್ಟಿದ್ದಾರೆ. ಆಕೆ ರಿಜಿಷ್ಟ್ರೇಶನ್ ಆಫೀಸ್ಗೆ ಹೋಗಿ ವಿಜಿ ಹಣ ನೀಡಿರುವುದು ಸುಳ್ಳು ಎಂದು ಹೇಳಿದ್ದಾಳೆ. ನಾಗರತ್ನ ಎಂದರೆ ವಿಜಿಗೆ ಆಗುವುದ್ದಿಲ್ಲ. ದುನಿಯಾ ವಿಜಿಗೆ ನಿನ್ನ ಮೇಲೆ ಪ್ರೀತಿ ಇದರೆ ಕರೆಸಿಕೋ. ಯಾಕೆ ಹೀಗೆ ಸಾಯ್ತೀಯಾ? ಕೀರ್ತಿ ಗೌಡ ನನ್ನ ಸಂಸಾರ ಹಾಳು ಮಾಡಿದ್ದಾಳೆ ಎಂದು ಹೇಳಿದ್ದಳು. ಆದರೆ ಆಕೆಯ ಸಂಸಾರನೇ ಚೆನ್ನಾಗಿರಲಿಲ್ಲ. ಅವರ ಮಧ್ಯೆ ಸಾಕಷ್ಟು ವರ್ಷಗಳಿಂದ ಸಮಸ್ಯೆಯಿತ್ತು. ನಾನು ವಿಜಿ ಅವರನ್ನು ಮದುವೆಯಾಗಿ ಮೂರು ತಿಂಗಳಲ್ಲೇ ನಾಗರತ್ನ ತನ್ನ ಅಸಲಿ ಬುದ್ಧಿಯನ್ನು ತೋರಿಸಿದ್ದಳು ಎಂದರು.

ಯಾರೂ ಏನೇ ಹೇಳಿದ್ದರು ನಾನು ವಿಜಿ ಜೊತೆನೇ ಸಾಯೋವರೆಗೂ ಇರುತ್ತೇನೆ. ದುನಿಯಾ ವಿಜಿ ಅವರ ತಂದೆ-ತಾಯಿ ನನಗೆ ಸಪೋರ್ಟ್ ಮಾಡುತ್ತಾರೆ. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ್ದಾಗ ಅವರು ನನ್ನನ್ನು ಸಹಾಯ ಮಾಡಿದ್ದರು. ವಿಜಿ ಅವರು ತಂದೆ-ತಾಯಿ ಇಷ್ಟು ವರ್ಷ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದರು. ನಾಗರತ್ನ ಹಲ್ಲೆ ನಡೆಸಿದ ನಂತರ ನನ್ನ ಕುತ್ತಿಗೆ ಭಾಗಕ್ಕೆ ಗಾಯಗೊಂಡಿತ್ತು. ಅಲ್ಲದೇ ನನ್ನ ಕುತ್ತಿಗೆಯಲ್ಲದ್ದ ಮಾಂಗಲ್ಯ ಸರ ಅರ್ಧ ಮುರಿಯಿತು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ ನಂತರ ಡ್ರೈವರ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಕಾರು ತೆಗೆದುಕೊಂಡು ಹೋದಳು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸುವ ಮೊದಲು ಆಕೆಯ ಮಕ್ಕಳು ಮನೆಯಲ್ಲಿದ್ದ ಸಿಸಿಟಿವಿಯನ್ನು ಒಡೆದು ಹಾಕಿದ್ದಾರೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=5y-xIKjMyBI


Leave a Reply