ಈ ಗುಣಗಳು ನಿಮ್ಮಲ್ಲಿದ್ದರೆ ದಂಗಲ್ ಗರ್ಲ್ ನಿಮ್ಮನ್ನ ಮದ್ವೆ ಆಗೋದು ಫಿಕ್ಸ್

ಮುಂಬೈ: ದಂಗಲ್ ಗರ್ಲ್ ಫಾತಿಮಾ ಸನಾ ಶೇಖ್ ತಾನು ಮದುವೆ ಆಗುವ ಚೆಲುವ ಹೇಗಿರಬೇಕೆಂಬುದನ್ನು ರಿವೀಲ್ ಮಾಡಿದ್ದಾರೆ. ಫಾತಿಮಾ ಹೇಳುವ ಗುಣಗಳು ನಿಮ್ಮಲ್ಲಿದ್ದರೆ ನೀವು ಸಹ ಸುಂದರ ಚೆಲುವೆ ಪ್ರಪೋಸ್ ಮಾಡಬಹುದು.

ಮುಂಬೈನಲ್ಲಿ ನಡೆದ ‘ವೆಡ್ಡಿಂಗ್ ಜಂಕ್ಷನ್’ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು. ಮದುವೆ ಹೆಣ್ಣಿನ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ಫಾತಿಮಾರಿಗೆ ನಿಮ್ಮ ಮದುವೆ, ಕನಸಿನ ಹುಡುಗ ಹೇಗಿರಬೇಕೆಂದು ಮಾಧ್ಯಮಗಳು ಪ್ರಶ್ನಿಸಿದಾಗ, ನನ್ನವನು ಹಾಸ್ಯ ಮನೋಭಾವವನ್ನು ಹೊಂದಿರಬೇಕು. ಜನರನ್ನು ನಗಿಸುವಂತಹ ಸಾಮಥ್ರ್ಯ ಆತನಲ್ಲಿರಬೇಕು. ಹಾಗೆಯೇ ಬುದ್ದಿವಂತನಾಗಿದ್ದು, ನನಗೆ ಸಲಹೆ ನೀಡುವಂತಿರಬೇಕು. ಒಳ್ಳೆಯದನ್ನು ಗುರುತಿಸುವ ಮತ್ತು ಪ್ರಶಂಸಿಸುವ ವ್ಯಕ್ತಿತ್ವ ನನ್ನವನು ಹೊಂದಿರಬೇಕು ಎಂದು ಹೇಳಿ ಮುಗಳ್ನಕ್ಕರು.

ಮಲ್ಟಿಸ್ಟಾರ್ ಗಳನ್ನು ಹೊಂದಿರುವ ಥಗ್ಸ್ ಆಫ್ ಹಿಂದೋಸ್ತಾನ್ ಚಿತ್ರದಲ್ಲಿ ಫಾತಿಮಾ ನಟಿಸಿದ್ದಾರೆ. 2018ರ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಆಮಿರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಚಿತ್ರ ಹೊಂದಿದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಇದೇ ನವೆಂಬರ್ 8ರಂದು ದೀಪಾವಳಿಗೆ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರ ಏಕಕಾಲದಲ್ಲಿ ಹಿಂದಿ, ತೆಲಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *